ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ ಅಸ್ತಿತ್ವಕ್ಕೆ

ಮಂಗಳೂರು, ಡಿ.13: 'ಮಾದಕ ದ್ರವ್ಯ ಮತ್ತು ಅಪರಾಧ ಚಟುವಟಿಕೆಗಳ ವಿರುದ್ಧ ಉತ್ತಮ ಸಮಾಜಕ್ಕಾಗಿ' ಎಂಬ ಧ್ಯೇಯದೊಂದಿಗೆ ರಚಿಸಲಾದ 'ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ' ಡಿ.10ರಂದು ಉದ್ಘಾಟನೆಗೊಂಡಿತು.
ನಾಟೆಕಲ್ ನ ಕುನಿಲ್ ಸ್ಕೂಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಳ್ಳಾಲ ಠಾಣೆಯ ಇನ್ ಸ್ಪೆಕ್ಟರ್ ಬಾಲಕೃಷ್ಣ ಎಚ್.ಎನ್., ನೋಟರಿ ವಕೀಲನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಹಾಗೂ ವಕೀಲ ಅರುಣ್ ಬಂಗೇರ ಅವರು ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆಯ ಲೋಗೋ ಅನಾವರಣಗೊಳಿಸುವ ಮೂಲಕ ವೇದಿಕೆಯನ್ನು ಉದ್ಘಾಟಿಸಿದರು.
ವೇದಿಕೆಯ ನೂತನ ಅಧ್ಯಕ್ಷರಾದ ಹಾಶಿಂ ಬಿ.ಎಂ., ಉಪಾಧ್ಯಕ್ಷ ಕೆ.ಅಬೂಬಕರ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಪಿ.ಎಸ್. ಹಾಗೂ ಜೊತೆ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಮದನಿ ವೇದಿಕೆಯಲ್ಲಿದ್ದರು.
Next Story





