ಹ್ಯಾಂಡ್ ಬಾಲ್ ಪಂದ್ಯಾಟ: ರಾಷ್ಟ್ರಮಟಕ್ಕೆ ಆಯ್ಕೆ

ಬಂಟ್ವಾಳ : ಕಲ್ಲಡ್ಕ ಸಮೀಪದ ಅಮ್ಟೂರು ದೇವಮಾತ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಲಿಖಿತ್, ಮುಹಮ್ಮದ್ ಫಾಝ್, ವೃಷಭ್ ಜಿ ಅರಸ ಹಾಗೂ ಲಕ್ಷತ್ 14 ರ ವಯೋಮಾನದ ಬಾಲಕರ ವಿಭಾಗದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ರಾಷ್ಟ್ರಮಟಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ಶಾಲಾ ದ್ಯೆಹಿಕ ಶಿಕ್ಷಣ ಶಿಕ್ಷಕ ಮಹೇಶ್ ಶೆಟ್ಟಿ ತರಬೇತಿ ನೀಡಿದ್ದು ಡಿ.16 ರಿಂದ 21ರ ತನ ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ತಂಡದಿಂದ ಪ್ರತಿನಿಧಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





