ಬಂಟ್ವಾಳ : ಬಿಲ್ಡಿಂಗ್ ಕೆಲಸದ ಸಾಮಗ್ರಿ ಕಳವು

ಬಂಟ್ವಾಳ : ಬಿಲ್ಡಿಂಗ್ ಕೆಲಸದ ಸಾಮಗ್ರಿಗಳು ಕಳವು ಆಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುದು ಗ್ರಾಮದ ಅಮ್ಮೆಮ್ಮಾರ್ ನಿವಾಸಿ ಸಿವಿಲ್ ಇಂಜಿನಿಯರ್ ಹಮ್ಮಬ್ಬ ಮರ್ಜೂಕ್ ಎಂಬವರು ಸೈಟ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದು, ಮನೆಯ ಪಕ್ಕದಲ್ಲಿರುವ ಶೆಡ್ನಲ್ಲಿ ಇಟ್ಟಿದ್ದ ಸೈಟ್ ನ ಬಿಲ್ಡಿಂಗ್ ಕೆಲಸಕ್ಕೆ ಬೇಕಾದ ಸಾಮಗ್ರಿಗಳಾದ ಕಬ್ಬಿಣದ ಶೀಟು, ಜಾಕ್, ಸ್ಕಪೋಲ್ಡಿಂಗ್ ಇತ್ಯಾದಿಗಳು ಕಳವಾಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ವಿಚಾರಿಸಿದಾಗ ಶರೂಪ್ ಆಲಂ ಎಂಬಾತ ಶೆಡ್ ನಲ್ಲಿದ್ದ ಒಟ್ಟು ರೂ 9,23,200 ಮೌಲ್ಯದ ಬಿಲ್ಡಿಂಗ್ ಕೆಲಸಕ್ಕೆ ಬೇಕಾದ ಸಾಮಗ್ರಿಗಳನ್ನು ವಾಹನದಲ್ಲಿ ಕಳವು ಮಾಡಿಕೊಂಡು ಹೋಗಿರುವುದು ತಿಳಿದುಬಂದಿದೆ ಎಂದು ದೂರಲಾಗಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Next Story





