ಕೊಲ್ಯ: ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಉಳ್ಳಾಲ: ಮನೆಗೆ ನುಗ್ಗಿ ಚಿನ್ನಾಭರಣ ಕಳವುಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯದಲ್ಲಿ ನಡೆದಿದೆ.
ಕೊಲ್ಯ ನಿವಾಸಿ ಕೃಷ್ಣ ಬಿ.ಎಂ. ಅವರ ಮನೆಯಲ್ಲಿ ಸುಲೋಚನಾ ಎಂಬವರನ್ನು ಡಿ.6 ರಂದು ನಿಲ್ಲಿಸಿ ಮದುವೆಗೆ ಹೋಗಿದ್ದರು. ಸುಲೋಚನಾ ಮನೆಯಲ್ಲಿ ಗುಡಿಸುತ್ತಿರುವಾಗ ಓರ್ವ ಅಪರಿಚಿತ ವ್ಯಕ್ತಿ ಬಂದು ನಾನು ಎಲೆಕ್ಟ್ರಿಷ್ಯನ್ ಕಡೆಯವರು, ಲೈಟಿಂಗ್ ಸ್ವಿಚ್ ಆಫ್ ಮಾಡಲು ಬಂದಿರುವುದಾಗಿ ಹೇಳಿ ಒಳ ಪ್ರವೇಶಿಸಿದ್ದು, ಮನೆಯ ಒಳಗೆ ಆತ ಹುಡುಕುತ್ತಿದ್ದುದನ್ನು ನೋಡಿ ಅನುಮಾನಗೊಂಡ ಸುಲೋಚನಾ ಬೊಬ್ಬೆ ಹಾಕಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿ ಅಲ್ಲಿಂದ ಹೊರಟು ಹೋಗಿದ್ದ ಎಂದು ತಿಳಿದು ಬಂದಿದೆ.
ಇದರ ಬಳಿಕ ಮನೆಯ ಬೆಡ್ ರೂಂ ನ ಕಪಾಟಿನಲ್ಲಿರಿಸಿದ್ದ 20 ಗ್ರಾಂ. ತೂಕದ ಕೈಬಳೆಗಳು, 12 ಗ್ರಾಂ ತೂಕದ 2 ಜೊತೆ ಕಿವಿ ಒಲೆಗಳು, ಹಾಗೂ 5 ಗ್ರಾಂ ತೂಕದ 1 ಜೊತೆ ಕಿವಿ ಒಲೆ ಮತ್ತು 3 ಗ್ರಾಂ ತೂಕದ 1 ಜೊತೆ ಕಿವಿ ಒಲೆ ಕಳವು ಆಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





