ಮಂಗಳೂರಿಗೆ ಮತ್ತೊಂದು ಮಾರ್ಷಲ್ ದ್ವೀಪದ ಪ್ರವಾಸಿ ಹಡಗು ಆಗಮನ

ಮಂಗಳೂರು: ಮಾರ್ಷಲ್ ದ್ವೀಪದ ಮೂಲಕ ಮುಂಬೈ, ಗೋವಾದ ಮೂಲಕ ಮಂಗಳೂರು ಬಂದರಿಗೆ ಎಂ.ಎಸ್.ನೌಟಿಕ ಪ್ರವಾಸಿ ಹಡಗು ಡಿ.15ರಂದು ಆಗಮಿಸಿದೆ.
180.5 ಮೀಟರ್ ಉದ್ದದ ಈ ಐಷಾರಾಮಿ ಹಡಗು 30,277 ಟನ್ ಸಾಮರ್ಥ್ಯ ವನ್ನು ಹೊಂದಿದೆ. ಈ ಪ್ರವಾಸಿ ಹಡಗಿನಲ್ಲಿ 501 ಪ್ರವಾಸಿಗರು ಹಾಗೂ 350 ಸಿಬ್ಬಂದಿ ಗಳು ಆಗಮಿಸಿದ್ದಾರೆ.
ಮಂಗಳೂರು, ಕಾರ್ಕಳ, ಮೂಡುಬಿದಿರೆ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಅವರು ಇಂದು ಭೇಟಿ ನೀಡಿದ್ದಾರೆ ಬಳಿಕ ಈ ಹಡಗು ಕೇರಳದ ಕೊಚ್ಚಿನ್ ಗೆ ತೆರಳಿದೆ.
Next Story





