ಸೈದಾನಿ ಬೀಬಿ ದರ್ಗಾದಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್

ಮಂಗಳೂರು: ನಗರದ ಹಝರತ್ ಸೈದಾನಿ ಬೀಬಿ ದರ್ಗಾ ವಠಾರದಲ್ಲಿ ಸ್ವಲಾತ್ ಮಜ್ಲಿಸ್, ಸಾಮೂಹಿಕ ಝಿಯಾರತ್ ಹಾಗೂ ಬುರ್ದಾ ಮಜ್ಲಿಸ್ ಇತ್ತೀಚೆಗೆ ನಡೆಯಿತು. ದರ್ಗಾ ಸಮಿತಿಯ ಅಧ್ಯಕ್ಷ ನಿವೃತ್ತ ಡಿವೈಎಸ್ಪಿ ಕೆಎಂ ಶರೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿ ತಾಲೂಕು ಸಹಾಯಕ ಖಾಝಿ ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಸ್ವಲಾತ್ ಮಸ್ಲಿಸ್‌ಗೆ ನೇತೃತ್ವ ವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಎ. ಖಾಸಿಂ ಮಲ್ಲಿಗೆಮನೆ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮಸೂದ್ ಸಅದಿ ಗಂಡಿಬಾಗಿಲು, ಮಿಸ್ಕಾತುಲ್ ಮದೀನಾ ತಂಡದವರಿಂದ ಬುರ್ದಾ ಆಲಾಪಣೆ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಭಾಗವಹಿಸಿದ್ದರು. ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಹಮಿದ್ ವಂದಿಸಿದರು.
Next Story





