‘ಸಿಟಿ ಗೋಲ್ಡ್’ನಲ್ಲಿ ‘ಮ್ಯಾಜಿಕ್ ಡೈಮಂಡ್ ಫೆಸ್ಟ್’ಗೆ ಚಾಲನೆ

ಮಂಗಳೂರು : ನಗರದ ಕಂಕನಾಡಿಯಲ್ಲಿರುವ ‘ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್’ ವತಿಯಿಂದ ನಡೆಯುವ ‘ಮ್ಯಾಜಿಕ್ ಡೈಮಂಡ್ ಫೆಸ್ಟ್’ಗೆ ಚಾಲನೆ ಶನಿವಾರ ಚಾಲನೆ ನೀಡಲಾಯಿತು.
ನಟಿ ಹಾಗು ಗಾಯಕಿ ಮೈತ್ರಿ ಅಯ್ಯರ್ ‘ಮ್ಯಾಜಿಕ್ ಡೈಮಂಡ್ ಫೆಸ್ಟ್’ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗ್ರಾಹಕರ ಸಂತೃಪ್ತಿಯ ಸೇವೆಗೆ ‘ಸಿಟಿ ಗೋಲ್ಡ್’ ಮನೆ ಮಾತಾಗಿದೆ. ಈ ಸಂಸ್ಥೆಯ ಮಳಿಗೆಗೆ ಭೇಟಿ ನೀಡಿದವರು ನಿರಾಶರಾದುದೇ ಇಲ್ಲ. ಆಡಳಿತ ಮಂಡಳಿ, ಸಿಬ್ಬಂದಿ ವರ್ಗದ ನಗುಮುಖದ ಸೇವೆಯು ಅನನ್ಯವಾಗಿದೆ ಎಂದರು.
‘ಫೆಸ್ಟ್’ನ ಮಕ್ಕಳ ವಿಭಾಗವನ್ನು ಉದ್ಘಾಟಿಸಿದ ರೂಪದರ್ಶಿ ವಿಜಿತಾ ಪೂಜಾರಿ ಮಾತನಾಡಿ ‘ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್’ ವ್ಯವಹಾರದ ಜೊತೆಗೆ ಸಮಾಜ ಸೇವೆಯಲ್ಲೂ ನಿರತವಾಗಿದೆ. ಲಾಭಾಂಶದ ಒಂದು ಭಾಗವನ್ನು ಅರ್ಹರಿಗೆ ತಲುಪಿಸುವ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ‘ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್’ನ ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ಉಪಸ್ಥಿತರಿದ್ದರು. ಮುಸ್ತಫಾ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.
ಡಿ.31ರವರೆಗೆ ನಡೆಯುವ ‘ಮ್ಯಾಜಿಕ್ ಡೈಮಂಡ್ ಫೆಸ್ಟ್’ ಪ್ರಯುಕ್ತ ಮಕ್ಕಳ ಡೈಮಂಡ್ ಆಭರಣಗಳ ಸಂಗ್ರಹದ ಹೊಸ ಕೌಂಟರ್‌ನ್ನು ಮಂಗಳೂರಿನಲ್ಲಿ ಪ್ರಥಮ ಬಾರಿಗೆ ತೆರೆಯಲಾಗಿದೆ. ಫೆಸ್ಟ್ ಪ್ರಯುಕ್ತ ಡೈಮಂಡ್ ಖರೀದಿಯ ಪ್ರತಿ ಕ್ಯಾರೆಟ್‌ನ ಮೇಲೆ ಶೇ 30ರಷ್ಟು ರಿಯಾಯಿತಿ ದೊರೆಯಲಿದೆ. ಅಲ್ಲದೆ ಗ್ರಾಹಕರು ಯಾವುದೇ ಮಳಿಗೆಯಿಂದ ಖರೀದಿಸಿದ ವಜ್ರಾಭರಣಗಳ ಉಚಿತ ನಿರ್ವಹಣೆ ಮಾಡಿ ಕೊಡಲಾಗುವುದು. ಯಾವುದೇ ಮಳಿಗೆಗಳಿಂದ ಖರೀದಿಸಿದ ವಜ್ರಾಭರಣಗಳನ್ನು ಬದಲಾಯಿಸಿ ಕೊಡಲಾಗುವುದು ಹಾಗೂ ಚಿನ್ನಾಭರಣ ಖರೀದಿಯಲ್ಲಿನ ಮೇಕಿಂಗ್ ಚಾರ್ಜಸ್ ಮೇಲೆ ಶೇ.55ರಷ್ಟು ರಿಯಾಯಿತಿ ನೀಡಲಾಗುವುದು.
ಪ್ರತಿ ಖರೀದಿಯ ಗ್ರಾಹಕರಿಗೆ ಸ್ಕ್ರಾಚ್ ಆ್ಯಂಡ್ ವಿನ್ ಕೂಪನ್ ವಿತರಿಸಲಾಗುವುದು. ವಿಜೇತರಿಗೆ ಚಿನ್ನದ ನಾಣ್ಯ ಹಾಗು ಇತರೆ ಉಡುಗೊರೆಗಳು ನೀಡಲಾಗುವುದು. ಮದುವೆ ಖರೀದಿಯಲ್ಲಿನ ಪ್ರತಿ ಗ್ರಾಹಕರಿಗೂ ಕೂಪನ್ ವಿತರಿಸಲಾಗುವುದು, ವಿಜೇತ 5 ಜೋಡಿ ನವ ದಂಪತಿಗೆ ಮಲೇಷ್ಯಾ ಪ್ರವಾಸ ಕೈಗೊಳ್ಳುವ ಸದವಕಾಶ ದೊರೆಯಲಿದೆ. ದೇಶ ವಿದೇಶಗಳಲ್ಲಿ ವೈವಿಧ್ಯಮಯ ರೀತಿಯಲ್ಲಿ ತಯಾರಿಸಲ್ಪಟ್ಟ ವಜ್ರಾಭರಣಗಳು ಪ್ರದರ್ಶನ ಹಾಗು ಮಾರಾಟ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.







