Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಗುತ್ತಿಗೆದಾರನ ಭೀಮಲ್‌ ಕಾಂಕ್ರಿಟ್...

ಗುತ್ತಿಗೆದಾರನ ಭೀಮಲ್‌ ಕಾಂಕ್ರಿಟ್ ಪ್ಲಾಂಟ್ ಗೆ ಬೀಗಜಡಿದ ಬಜ್ಪೆ ನಾಗರೀಕ ಹಿತರಕ್ಷಣಾ ವೇದಿಕೆ

ಬಜ್ಪೆ: ಅವೈಜ್ಞಾನಿಕ, ಅಸಮರ್ಪಕ ಚತುಷ್ಪಥ ಹೆದ್ದಾರಿ ಕಾಮಗಾರಿ ಆರೋಪ

ವಾರ್ತಾಭಾರತಿವಾರ್ತಾಭಾರತಿ16 Dec 2023 10:37 PM IST
share
ಗುತ್ತಿಗೆದಾರನ ಭೀಮಲ್‌ ಕಾಂಕ್ರಿಟ್ ಪ್ಲಾಂಟ್ ಗೆ ಬೀಗಜಡಿದ ಬಜ್ಪೆ ನಾಗರೀಕ ಹಿತರಕ್ಷಣಾ ವೇದಿಕೆ

ಬಜ್ಪೆ: ಇಲ್ಲಿನ ಚತುಷ್ಪಥ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಮತ್ತು ಅಸಮರ್ಪಕವಾಗಿದ್ದು, ಗುತ್ತಿಗೆದಾರ ತನಗಿಷ್ಟಬಂದಂತೆ ಕಾಮಗಾರಿ ನಡೆಸುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ನಾಗರೀಕರು ಬಜ್ಪೆ ನಾಗರೀಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪಟ್ಟಣ ಪಂಚಾಯತ್‌ ಅಧಿಕಾರಿಗಳ ಸಮ್ಮುಖದಲ್ಲೇ ಗುತ್ತಿಗೆದಾರನ ಭೀಮಲ್‌ ಕಾಂಕ್ರಿಟ್ ಪ್ಲಾಂಟ್ ಗೆ ಶನಿವಾರ ಬೀಗಜಡಿದು ಆಕ್ರೋಶ ವ್ಯಕ್ತಪಡಿಸಿದರು.

ಬಜ್ಪೆ ಪೇಟೆಯ ಮುಖ್ಯ ರಸ್ತೆ ಹೆದ್ದಾರಿಯ 1 ಕಿ.ಮೀಟರ್ ಉದ್ದವೂ ಇಲ್ಲದ ಕಾಮಗಾರಿ ಒಂದೂವರೆ ವರ್ಷ ತೆಗೆದುಕೊಂಡಿ ರುವ ಗುತ್ತಿಗೆದಾರ ಇದೇ ನೆಪದಲ್ಲಿ ಪಿಡ್ಲ್ಯೂಡಿ ಇಲಾಖೆಯೊಂದಿಗೆ ಶಾಮೀಲಾಗಿ ಕಾಂಕ್ರಿಟ್ ಪ್ಲಾಂಟ್‌ ಆರಂಭಿಸಿದ್ದ. ಆದರೆ ಇಲ್ಲಿನ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೇ ಬೇರೆಡೆಯ ಕಾಮಗಾರಿಗಳಿಗೆ ಇಲ್ಲಿಂದಲೇ ಕಾಂಕ್ರಿಟ್‌ ಮಿಕ್ಸರ್‌ ಸರಬರಾಜು ಮಾಡುತ್ತಿದ್ದಾನೆ ಎಂದು ನಾಗರೀಕ ಹಿತರಕ್ಷಣಾ ಸಮಿತಿ ಗಂಭೀರ ಆರೋಪ ಮಾಡಿದೆ.

ಜನನಿಬಿಡ ಪ್ರದೇಶದಲ್ಲಿ ಈ ಕಾಂಕ್ರಿಟ್‌ ಮಿಕ್ಸರ್‌ ಕಾರ್ಯಾಚರಿಸುತ್ತಿದ್ದು, ಇದನ್ನು ಮುಚ್ಚುಂತೆ ಆಗ್ರಹಿಸಿ ಅಲ್ಲಿನ ಸ್ಥಳಿಯರು ಪಟ್ಟಣ ಪಂಚಾಯತ್ ಗೆ ಮನವಿ ಸಲ್ಲಿಸಿದ್ದರು. ಜೊತೆಗೆ ಲೋಕಾಯುಕ್ತಕ್ಕೂ ಮನವಿ ಸಲ್ಲಿಸಿದ್ದರು. ಈಮನವಿಯನ್ನು ಪುರಸ್ಕರಿಸಿದ್ದ ಲೋಕಾಯುಕ್ತ ಅಧಿಕಾರಿಗಳು ಕಾಂಕ್ರಿಟ್‌ ಮಿಕ್ಸರ ಪ್ಲಾಂಟನ್ನು ಮುಚ್ಚಿಸುವಂತೆ ನೋಟಿಸ್‌ ಜಾರಿಗೊಳಿಸಿತ್ತು. ಆದರೆ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಯಾವುದೇ ಕ್ರಮ ಜರುಗಿಸದೆ ಕಣ್ಮುಚ್ಚಿ ಕುಳಿತು ಗುತ್ತಿಗೆದಾರರಿಗೆ ಸಹಕರಿಸುತ್ತಿದ್ದರು ಎಂದು ಆಕ್ರೋಶಿತ ನಾಗರೀಕರು ಆರೋಪಿಸಿದ್ದಾರೆ.

ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯ ಬಗ್ಗೆ ಸತತ ಹೋರಾಟ ಮಾಡುತ್ತಾ ಬಂದಿರುವ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ, ಇಂದು ಬಜ್ಪೆ ನಾಗರಿಕರ ಸಮ್ಮುಖದಲ್ಲಿ ಬೃಹತ್ ಮಟ್ಟದಲ್ಲಿ ಪ್ರತಿಭಟಿಸಿ, ನಮ್ಮ ರಸ್ತೆ ಕಾಮಗಾರಿ ಪೂರ್ತಿಗೊಳಿಸಿ ಅಥವಾ ಕಾಂಕ್ರಿಟ್ ಪ್ಲಾಂಟ್‌ ಮುಚ್ಚಿಸಬೇಕೆಂದು ಆಗ್ರಹಿಸಿ ಪ್ಲಾಂಟ್‌ ಮುಂಭಾಗ ಪ್ರತಿಭಟನೆ ನಡೆಸಿತು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್‌ ನಿರೀಕ್ಷಕರು ಮತ್ತು ಪಟ್ಟಣ ಪಂಚಾಯತ್ ಅಧಿಕಾರಿಗಳು ಪ್ರತಿಭಟನಾಕಾರರ ಪ್ರಶ್ನೆಗಳಿಗೆ ತಬ್ಬಿಬ್ಬಾಗಿ ಪ್ಲಾಂಟೇಶನ್‌ ಗೇಟಿಗೆ ಬೀಗ ಜಡಿಯುವಂತೆ ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.

ಈ ವೇಳೆ ಪ್ರತಿಭಟನಾ ಸ್ಥಳದಲ್ಲಿದ್ದ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸಿರಾಜ್ ಬಜ್ಪೆ ಮಾತನಾಡಿ, ಬಜ್ಪೆ ನಾಗರಿಕರು ಸಮಿತಿ ಹೆದ್ದಾರಿಯ ಹೆಸರಿನಲ್ಲಿ ಅವ್ಯವಹಾರ ಮತ್ತು ಅವೈಜ್ಞಾನಿಕ ಕಾಮಗಾರಿಗಳ ಕುರಿತು ಪ್ರತಿಭಟನೆ ಗಳನ್ನು ಮಾಡುತ್ತಲೇ ಬರುತ್ತಿದ್ದೇವೆ. ಸಂಬಂಧ ಪಟ್ಟ ಇಲಾಖೆಗಳು, ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಿ ಆಗ್ರಹಿಸಿದರೂ ಈ ವರೆಗೂ ನಮ್ಮ ಬನೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆತಿಲ್ಲ. ಈ ವೆರೆಗೆ ಮಾಡಿರು ಎಲ್ಲಾ ಕಾಮಗಾರಿಗಳು ಕಳಪೆ ಎಂದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದ ಎಇಇ ಅವರು ಒಪ್ಪಿಕೊಂಡಿದ್ದಾರೆ. ರಸ್ತೆ ಇನ್ನೂ ಉದ್ಘಾಟನೆಯೂ ಗೊಂಡಿಲ್ಲ. ಈಗಲೇ ರಸ್ತೆಯ ಜಲ್ಲಿಕಲ್ಲುಗಳು ಎದ್ದು ಬರುತ್ತಿದೆ. ಈಗಾಗಲೇ ಮಾಡಲಾಗಿರುವ ಕಾಮಗಾರಿಯನ್ನು ತೆಗೆಸಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿಕೊಡುವುದಾಗಿ ಅವರು ಭರವಸೆ ನೀಡಿದ್ದರು. ಆದರೆ, ಈ ವರೆಗೆಗೂ ಒಂದು ಪೈಸೆಯ ಕೆಲಸವನ್ನೂ ಮಾಡದೆ, ಜನ ಸಾಮಾನ್ಯರಿಗೆ ಅವಶ್ಯವಿರುವ ರೀತಿಯಲ್ಲಿ ನಿಸರ್ಗ ಹೋಟೇಲ್‌ ವರೆಗಿನ ಕಾಮಗಾರಿಯನ್ನು ಅರ್ಧ ಮಾಡಿದ್ದು, ಅದನ್ನು ಪೂರ್ತಿ ಮಾಡದೇ ಮತ್ತೆ ಅಲ್ಲೇ ಪಕ್ಕದಲ್ಲಿ ಜನರು ಓಡಾಡುವ ರಸ್ತೆಯನ್ನು ಕೆಡವಲು ಮುಂದಾಗಿದ್ದಾರೆ. ಒಟ್ಟಾರೆಯಾಗಿ ಬಜ್ಪೆಯ ನಾಗರೀಕರು ಪಿಡ್ಲ್ಯೂಡಿ ಅಧಿಕಾರಿಗಳು, ಗುತ್ತಿಗೆದಾರನ ಆಟಕ್ಕೆ ಬಲಿಪಶುಗಳಾಗುತ್ತಿದ್ದೇವೆ ಎಂದು ಅವರು ಆರೋಪಿಸಿದರು.

ಬಳಿಕ ಮಾತನಾಡಿದ ಸಮಿತಿಯ ಸಹಸಂಚಾಲಕ ಇಸ್ಮಾಯೀಲ್‌ ಇಂಜಿನಿಯರ್‌, ಈ ರಸ್ತೆಗೆ ಸಂಬಂಧಿಸಿ 3 ತಿಂಗಳಿಂದ ಸತತ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ. ಕಾಮಗಾರಿ ಆರಂಭಿಸಿ 1 ವರ್ಷ 3ತಿಂಗಳಾಯಿತು. 1 ಕಿ.ಮೀ. ಉದ್ದವೂ ಇಲ್ಲದ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಜೊತೆಗೆ ಈ ವರೆಗೆ ಮಾಡಿರುವ ಕಾಮಗಾರಿಗಳು ಸಂಪೂರ್ಣವಾಗಿ ಕಳಪೆಯಾಗಿದ್ದು, ಗುಣಮಟ್ಟ ಕಣ್ಣಿಗೆ ಎದ್ದು ಕಾಣುತ್ತಿದೆ. ಪತ್ರೀ ಸಲ ಪ್ರತಿಭಟನೆಗಳ ವೇಳೆ ಪಿಡ್ಲ್ಯೂಡಿ ಅಧಿಕಾರಿಗಳು ಬಂದು ಆಶ್ವಾಸನೆಗಳನ್ನಷ್ಟೇ ನೀಡುತ್ತಿದ್ದಾರೆ ವಿನಃ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಗಮನ ಹರಿಸುತ್ತಿಲ್ಲ. ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಆಗುವ ವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಪ್ರತಿಭಟನೆಯ ಸಂದರ್ಭ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ದೇವದಾಸ್, ಮುಲ್ಕಿ ಮೂಡಬಿದ್ರೆ ಐಟಿ ಸೆಲ್ ಅದ್ಯಕ್ಷರಾದ ನಿಸಾರ್ ಕರಾವಳಿ, ಗ್ರಾಮ ಪಂಚಾಯತ್ ಸದಸ್ಯರಾದ ಜೇಕಬ್ ಪಿರೇರಾ ಮತ್ತು ನಝೀರ್ ಕಿನ್ನಿಪದವು, ಎಸ್‌ಡಿಪಿಐ ರಾಜ್ಯ ಮುಖಂಡರಾದ ಅಥಾವುಲ್ಲಾ ಜೋಕಟ್ಟೆ, ಹಮೀದ್ ಕೂಲ್ ಪಾಯಿಂಟ್, ಸಂಶುಲ್ ಉಲಮಾ ಸಮಿತಿಯ ಅಧ್ಯಕ್ಷರಾದ ಮುಹಮ್ಮದ್‌ ಮೋನಾಕ, ಏಸ್ಕೆಸ್ಸೆಸ್ಸೆಫ್ ಮುಖಂಡರಾದ ಇಕ್ಬಲ್ ಬಜ್ಪೆ, ದಲಿತ ಸಂಘದ ಮುಖಂಡರಾದ ಲಕ್ಷ್ಮೀಶ್, ರಾಕೇಶ್ ಕುಂದರ್ ,ಎನ್‌.ಸಿ.ಎಫ್.‌ ಅಧ್ಯಕ್ಷರಾದ ಹಕೀಮ್ ಪ್ಯಾರಾ, ಯುವ ಸಂಘಟನೆಯ ಮುಖಂಡರಾದ ಅಝರ್, ಅನ್ವರ್, ಸಲಾಂ, ಸಾಮಜಿಕ ಕಾರ್ಯಕರ್ತರಾದ ಆಸೀಫ್ ಆಂಬುಲೆನ್ಸ್, ಥೋಮಸ್, ಬಜ್ಪೆ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಷರೀಫ್ .ಆಟೋ ಸಂಘದ ಮುಖಂಡರಾದ ಝಕೀರ್, ಭಾಸ್ಕರ್, ಕೆ.ಸಿ. ಹುಸೈನ್‌, ಷರೀಫ್ .ರಿಯಾಜ್, ಸಲಫಿ ಮೂವ್‌ ಮೆಂಟ್ ನ ಮುಖಂಡರಾದ ನಝೀರ್ ಹಿಲ್ ಟಾಪ್, ಷರೀಫ್ ಪಯಣಿಗ, ಎಸ್ಸೆಸ್ಸೆಫ್ ಮುಖಂಡರಾದ ಸಲೀಲ್, ಆಡಮ್, ಷರೀಫ್ ಪಡೀಲ್ ಮತ್ತು ಇಸ್ಮಾಯಿಲ್ ಜರಿ, ಮಕ್ಬೂಲ್ ಜರಿ, ಇರ್ಷಾದ್ ಬಜ್ಪೆ, ಶಾಂತ, ಅನ್ವರ್ ರಝಾಕ್ ಮತ್ತು ಕಾರ್ಡೋಜ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

"‌ಪಿಡ್ಲ್ಯೂಡಿ ಇಲಾಖೆ ಮಾಡಬೇಕಾದ ಎಲ್ಲಾ ರೀತಿಯ ತೆರವು ಕಾರ್ಯಾಚರಣೆಯನ್ನು ಬಜ್ಪೆ ನಾಗರೀಕ ಹಿತರಕ್ಷಣಾ ವೇದಿಕೆ ಮಾಡಿಕೊಟ್ಟಿದೆ. ಆದರೂ, ಇಲಾಖೆಯವರು ಕಾಮಗಾರಿ ಮುನ್ನಡೆಸಲು ಮನಸ್ಸು ಮಾಡುತ್ತಿಲ್ಲ. ಇಲ್ಲಿನ ನಾಗರೀಕರು ಜೀವಂತವಿದ್ದೇವೆ. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ಮಾಡಲು ಬಿಡುವುದಿಲ್ಲ. ಉತ್ತಮ ಗುಣಮಟ್ಟದ ಚತುಷ್ಪಥ ರಸ್ತೆ ನಿರ್ಮಾಣ ಆಗುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ".

- ಸಿರಾಜ್ ಬಜ್ಪೆ, ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕ

"ಪಿಡ್ಲ್ಯೂಡಿ ನಿಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರ ಸೇರಿಕೊಂಡು ಬಜ್ಪೆ ನಾಗರೀಕರ ಜೀವನದಲ್ಲಿ ಆಟವಾಡುತ್ತಿದ್ದಾರೆ. ಇದನ್ನು ಯಾವುದೇ ಕಾಣಕ್ಕೂ ಸಹಿಸಲು ಸಾದ್ಯವಿಲ್ಲ. 1ವರ್ಷ 3ತಿಂಗಳಾದರೂ 1 ಕಿ.ಮೀ. ಉದ್ದವೂ ಇಲ್ಲದ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗದ, ಕಣ್ಣುಗೆ ರಾಚುವಂತೆ ಕಲಪೆ ಕಾಮಗಾರಿ ಮಾಡಿರುವ ಭೀಮಲ್‌ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಈ ಕಾಮಗಾರಿಯನ್ನು ಬೇರೆ ಗುತ್ತಿಗೆದಾರರಿಗೆ ವಹಿಸಿ ಶೀಘ್ರ ಗುಣಮಟ್ಟದ ಕಾಮಗಾರಿ ಪೂರ್ತಿಗೊಳಿಸಬೇಕು".

-ಇಸ್ಮಾಯಿಲ್ ಇಂಜಿನಿಯರ್, ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಹ ಸಂಚಾಲಕ

"ಸಾರ್ವಜನಿಕರು ಬೇಡಿಕೆ ಈಡೇರುವವರೆಗೆ ಭೀಮಲ್‌ ಕಾಂಕ್ರಿಟ್ ಪ್ಲಾಂಟ್ ಮುಚ್ಚುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಕಾರಣ ಸ್ಥಳಕ್ಕೆ ಬಜ್ಪೆ ಪಟ್ಟಣ ಪಂಚಾಯತ್‌ ನ ಹಿರಿಯ ಅಭಿಯಂತರರ ಜೊತೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿದ್ದೇವೆ. ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಕಾಮಗಾರಿ ಆಗಬೇಕೆಂಬ ದೃಷ್ಠಿಯಿಂದ ಪ್ಲಾಂಟ್‌ ಗೆ ಬೀಗ ಹಾಕಿದ್ದೇವೆ. ಮುಂದಿನ ಕಾಮಗಾರಿ ಅತೀಶೀಘ್ರದಲ್ಲಿ ಮಾಡುವ ಕುರಿತು ಅಧಿಕಾರಿಗಳ ಜೊತೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಪಟ್ಟಣ ಪಂಚಾಯತ್‌ ನಿಂದ ಫ್ಲಾಂಟ್‌ ಮುಚ್ಚುವಂತೆ ನೋಟಿಸ್‌ ಜಾರಿ ಮಾಡಲಾಗಿತ್ತು. ಆದರೂ ಅವರು ಮುಚ್ಚಿರಲಿಲ್ಲ. ಆದರೆ ಇಂದು ಇದಕ್ಕೆ ಬೀಗ ಹಾಕಲಾಗಿದೆ".

-ರವಿ, ಕಂದಾಯ ನಿರೀಕ್ಷಕರು‌, ಬಜ್ಪೆ ಪಟ್ಟಣ ಪಂಚಾಯತ್



share
ವಾರ್ತಾಭಾರತಿ
ವಾರ್ತಾಭಾರತಿ
Next Story
X