ಕೋಡಿಮಜಲು: ಮರ್ಹೂಂ ಪಿಬಿಎ ರಝಾಕ್ ಸ್ಮರಣಾರ್ಥ ಸಾರ್ವಜನಿಕ ಬಾವಿ ಲೋಕಾರ್ಪಣೆ

ಬಂಟ್ವಾಳ, ಡಿ.17: ಜಂಇಯ್ಯತುಲ್ ಫಲಾಹ್ ಮಂಗಳೂರು ಘಟಕದ ವತಿಯಿಂದ ಮರ್ಹೂಂ ಹಾಜಿ ಪಿ.ಬಿ. ಅಬ್ದುರ್ರಝಾಕ್ ಅವರ ಸ್ಮರಣಾರ್ಥ ಸಾರ್ವಜನಿಕ ಬಾವಿ ಲೋಕಾರ್ಪಣೆ ಕಾರ್ಯಕ್ರಮ ಇಂದು ಕೋಡಿಮಜಲು ಎಂಬಲ್ಲಿ ನಡೆಯಿತು.
ಕೋಡಿಮಜಲು ನೂರುಲ್ ಹುದಾ ಮಸೀದಿಯ ಖತೀಬ್ ದುಆಗೈದರು.
ಜಂಇಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ಅಧ್ಯಕ್ಷ ಹಾಜಿ ಬಿ.ಎಸ್.ಮುಹಮ್ಮದ್ ಬಶೀರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ರಹೀಮ್ ಕರ್ನಿರೆ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.
ಶಾಹುಲ್ ಹಮೀದ್ ದಮ್ಮಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ರಿಯಾಝ್ ಬಾವ, ಅಶ್ಫಾಕ್ ಕರ್ನಿರೆ, ಪರ್ವೇಝ್ ಅಲಿ, ಸೈಫುಲ್ಲಾ ಎಂ.ಎಸ್., ಫಯಾಝ್ ಜಿ.ಎ., ಕೋಡಿಮಜಲು ನೂರುಲ್ ಹುದಾ ಮದ್ರಸ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಸಿರಾಜ್ ಮತ್ತು ಜಂಇಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕ ಸದಸ್ಯರು ಉಪಸ್ಥಿತರಿದ್ದರು.
ಖಜಾಂಚಿ ಇಮ್ತಿಯಾಝ್ ಖತೀಬ್ ವಂದಿಸಿದರು.
Next Story







