ಪಿ.ಎ. ಕಾಲೇಜು: ಆರು ದಿನಗಳ ಕಾರ್ಯಾಗಾರ ಉದ್ಘಾಟನೆ

ಕೊಣಾಜೆ: ಎಐಸಿಟಿಇ - ಅಟಲ್ ಪ್ರಾಯೋಜಿತ 'ಮಿಶಿನ್ ಲರ್ನಿಂಗ್ ಅಪ್ರೋಚಸ್ ಟು ಸೆಕ್ಯೂರುಡು ಮಲ್ಟಿಮೋಡಲ್ ಬಯೋಮೆಟ್ರಿಕ್ಸ್ ಸಿಸ್ಟಮ್ ' ಎಂಬ ವಿಷಯದಲ್ಲಿ ಆರು ದಿನಗಳ ಫ್ಯಾಕಲ್ಟಿ ಡೆವೆಲಪ್ಮೆಂಟ್ ಕಾರ್ಯಕ್ರಮದ ಉದ್ಘಾಟನೆಯು ನಡುಪದವಿನ ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು.
ಸಮಾರಂಭವನ್ನು ಹೈದರಬಾದ್ ಐಐಐಟಿ ಮಾಜಿ ನಿರ್ದೇಶಕರಾದ ಪ್ರೊ. ಪಿ. ನಾಗಭೂಷಣ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ತಿಳಿಸುತ್ತಾ, ಇದರಲ್ಲಿ ಕಲಿಕೆಯು ಪ್ರಾಯೋಗಿಕ ಮತ್ತು ನಿರಂತರವಾಗಿರಬೇಕು ಮತ್ತು ಕೇವಲ ವೈಜ್ಞಾನಿಕ ಮತ್ತು ಸಮಗ್ರ ಶಿಕ್ಷಣ ವ್ಯವಸ್ಥೆಗೆ ಕಾರಣವಾಗುವ ತರಗತಿಯ ಬೋಧನೆಗೆ ಸೀಮಿತವಾಗಿರಬಾರದೆಂದು ಹೇಳಿದರು.
ಇಂದಿನ ಆಧುನಿಕ ತ್ರಂತ್ರಜ್ಞಾನದ ಕ್ಷೇತ್ರದಲ್ಲಿ ಅತ್ಯಾಧುನಿಕ ಒಳನೋಟಗಳೊಂದಿಗೆ ಶಿಕ್ಷಣ. ತಜ್ಞರನ್ನು ಸಬಲೀಕರಣ ಗೊಳಿಸುವ ಗುರಿಯನ್ನು ಹೊಂದಿರುವ ಈ ಕಾರ್ಯಕ್ರಮವು ಅತ್ಯಂತ ಪರಿಣಾಮಕಾರಿಯಾಗಿದೆ ಎಂದರು.
ಪಿಎ ಇಂಜಿನಿಯರ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಮಿಸ್ ಎಂ. ಕೆ. ಅವರು ತಮ್ಮ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊ. ಪಾಲಾಕ್ಷಪ್ಪ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕರು ಮತ್ತು ಉಪಪ್ರಾಂಶುಪಾಲರಾದ ಪ್ರೊ. ಶರ್ಮಿಳಾ ಕುಮಾರಿ ಇವರು ಆರು ದಿನಗಳ ಫೆಕಲ್ಟಿ ಡೆವೆಲಪ್ಮೆಂಟ್ ಕಾರ್ಯಕ್ರಮದ ಸಮಗ್ರ ಮುನ್ನುಡಿಯನ್ನು ಒದಗಿಸಿ ಮಾಹಿತಿ ನೀಡಿದರು.
ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರೊ. ಫಾತಿಮತ್ ರೆಹಾನಾ ರವರು ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಅಂಕಿತ ಅವರು ವಂದಿಸಿದರು.







