ಜೋಯಾಲುಕ್ಕಾಸ್ ‘ಸೀಸನ್ ಆಫ್ ಗಿವಿಂಗ್’ ಅಭಿಯಾನ
ಮಜೂರಿಯ ಮೇಲೆ ಫ್ಲಾಟ್ ಶೇ.25ರಷ್ಟು ರಿಯಾಯಿತಿ

ಮಂಗಳೂರು, ಡಿ.18: ಜೋಯಾಲುಕ್ಕಾಸ್ ತನ್ನ ‘ಸೀಸನ್ ಆಫ್ ಗಿವಿಂಗ್ ’ಅಭಿಯಾನವನ್ನು ಪ್ರಾರಂಭಿಸಿದೆ.
ಅನಿವಾಸಿ ಇಂಜಿನಿಯರ್ ಹಾಗೂ ಗ್ರಾಹಕರಾದ ಅಶೋಕ್ ಪೈ ಚಾಲನೆ ನೀಡಿದರು. ದಾಯ್ಜಿ ವರ್ಲ್ಡ್ ನಿರ್ದೇಶಕ ವಾಲ್ಟರ್ ನಂದಳಿಕೆ ಶೇ 25 ರಿಯಾಯಿತಿಯ ಪೋಸ್ಟರ್ ಅನಾವರಣಗೊಳಿಸಿದರು.
ವೀಣಾ ಪೈ ಹೊಸ ನಕ್ಷತ್ರ ಮಾದರಿಯ ಡೈಮಂಡ್‌ನ್ನು ಬಿಡುಗಡೆಗೊಳಿಸಿದರು. ಬ್ರಾಂಚ್ ಮೆನೇಜರ್ ಹರೀಶ್ ಪಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ವೇತಾ ಜೀವನ್ ಕಾರ್ಯಕ್ರಮ ನಿರೂಪಿಸಿದರು.
ದೇಶಾದ್ಯಂತ ಲಭ್ಯ: ಜೋಯಾಲುಕ್ಕಾಸ್ ‘ಸೀಸನ್ ಆಫ್ ಗಿವಿಂಗ್’ನ ಈ ವಿಶೇಷ’ ಆವೃತ್ತಿ ಚಿನ್ನ ಮತ್ತು ವಜ್ರಾಭರಣಗಳ ಮಜೂರಿಯ ಮೇಲೆ ಫ್ಲಾಟ್ ಶೇ. 25ರಷ್ಟು ರಿಯಾಯಿತಿ ನೀಡುತ್ತಿದೆ ಎಂದು ಜೋಯಾಲುಕ್ಕಾಸ್ ಸಮೂಹದ’ ಅಧ್ಯಕ್ಷ ಜಾಯ್ ಆಲುಕ್ಕಾಸ್ ಅವರು ಕೊಡುಗೆಯನ್ನು ಘೋಷಿಸಿದ್ದಾರೆ.
ಈ ‘ಸೀಸನ್ ಆಫ್ ಗಿವಿಂಗ್’ ಅಭಿಯಾನ ಎಲ್ಲ ಚಿನ್ನ ಮತ್ತು ವಜ್ರದ ಆಭರಣಗಳ ಮಜೂರಿಯ ಮೇಲೆ ಫ್ಲಾಟ್ ಶೇ.25ರಷ್ಟು ನೀಡುವುದು ವಿಶೇಷವಾಗಿದೆ. ಕ್ರಿಸ್ಮಸ್, ಹೊಸ ವರ್ಷದ ಸೀಸನ್‌ನ ಈ ಕೊಡುಗೆಗಳು ಭಾರತದಾದ್ಯಂತ ಜ.15ರ ವರೆಗೆ ಎಲ್ಲ ಜೋಯಾಲುಕ್ಕಾಸ್ ಶೋರೂಂಗಳಲ್ಲಿ ಲಭ್ಯವಿದೆ. ಹಬ್ಬದ ಈ ರಿಯಾಯಿತಿಯ ಜತೆಗೆ ಗ್ರಾಹಕರು ಒಂದು ವರ್ಷದ ಉಚಿತ ವಿಮೆ, ಜೋಯಾಲುಕ್ಕಾಸ್ ಖರೀದಿಸಿದ ಎಲ್ಲ ಆಭರಣಗಳಿಗೆ ಆಜೀವ ಪರ್ಯಂತ ಉಚಿತ ನಿರ್ವಹಣೆ ಮತ್ತು ಮರು ಖರೀದಿ ಇರುತ್ತದೆ ಎಂದವರು ತಿಳಿಸಿದ್ದಾರೆ.







