ಬಬ್ಬುಕಟ್ಟೆ ಹಿರಾ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಅರಬಿಕ್ ಭಾಷಾ ದಿನಾಚರಣೆ

ಮಂಗಳೂರು : ಬಬ್ಬುಕಟ್ಟೆ ಹಿರಾ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಅರಬಿಕ್ ಭಾಷಾ ದಿನಾಚರಣೆ ಸೋಮವಾರ ನಡೆಯಿತು.
ಹಿರಾ ಶಿಕ್ಷಣ ಸಂಸ್ಥೆಯ ಅರಬಿಕ್ ಮತ್ತು ಇಸ್ಲಾಮಿಕ್ ಸ್ಟಡೀಸ್ ಮುಖ್ಯಸ್ಥರಾದ ಮೌಲಾನಾ ಸುಹೈಬ್ ಹುಸೈನ್ ನದ್ವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಹಿರಾ ಶಿಕ್ಷಣ ಸಂಸ್ಥೆಯು ಅರಬಿಕ್ ಭಾಷೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಮಕ್ಕಳಿಗಾಗಿ ಅರಬಿಕ್ ಭಾಷಣ, ಕ್ವಿಝ್, ಕ್ಯಾಲಿಗ್ರಫಿಯನ್ನು ನಡೆಸಿದ್ದಾರೆ, ಇದು ಅರಬಿಕ್ ಭಾಷೆಗೆ ನೀಡಿದ ಮಹತ್ವವಾಗಿದೆ ಎಂದರು.
ಮದೀನ ಅರಬಿಕ್ ಕೋರ್ಸ್ ತರಬೇತುದಾರರಾದ ಅಬ್ದುಲ್ ರಹ್ಮಾನ್ ಅಹ್ಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅರಬಿಕ್ ಭಾಷಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಸಿದರು. ಹಿರಾ ಶಿಕ್ಷಣ ಸಂಸ್ಥೆಯ ಸಂಚಾಲಕ ಅಬ್ದುಲ್ ರಹ್ಮಾನ್ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಂತಿ ಎಜುಕೇಶನ್ ಟ್ರಸ್ಟ್ ಚೇರ್‌ಮೆನ್ ಎ.ಎಚ್.ಮಹ್ಮೂದ್, ಕಾರ್ಯದರ್ಶಿ ಅಬ್ದುಲ್ ಕರೀಮ್, ಹಿರಾ ಪದವಿ ಕಾಲೇಜಿನ ಸಂಚಾಲಕ ರಹ್ಮತುಲ್ಲಾ, ಆಡಳಿತಾಧಿಕಾರಿ ಝಾಕೀರ್ ಹುಸೈನ್, ಟ್ರಸ್ಟಿಗಳಾದ ಇಲ್ಯಾಸ್ ಇಸ್ಮಾಯಿಲ್, ಸಾಜಿದಾ ಮುಹ್ಮಿನ್, ಆಯಿಶಾ ಉಮರ್, ಕೆ.ಎಮ್ ಶರೀಫ್, ಯು.ಎಚ್ ಹಸನಬ್ಬ, ಮೊಹಮ್ಮದ್ ಹನೀಫ್, ಪದವಿ ಕಾಲೇಜಿನ ಪ್ರಾಂಶುಪಾಲೆ ಆಶ್ಮಿಯಾ, ಹಿರಾ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪದ್ಯಾಯಿನಿ ಮಂಜುಳಾ, ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ರೀನಾ ಮೊದಲಾದವರು ಉಪಸ್ಥಿತರಿದ್ದರು.
ಮೊಹಮ್ಮದ್ ಅರ್ಷ್ ಕಿರಾಅತ್ ಪಠಿಸಿದರು, ರಮೀಯತ್ ಬಾನು ಸ್ವಾಗತಿಸಿದರು, ಅಬ್ದುಲ್ ಲತೀಫ್ ಆಲಿಯಾ ಮತ್ತು ರಮ್ಲತ್ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು, ಫಾತಿಮಾ ವಫಾ ವಂದಿಸಿದರು.







