ಮಾದಕ ದ್ರವ್ಯ ಸೇವನೆ ಆರೋಪ: ಇಬ್ಬರ ಸೆರೆ

ಮಂಗಳೂರು : ನಗರದ ಪಾಂಡೇಶ್ವರ ಮತ್ತು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರದ ಕೇಂದ್ರ ಉಪ ವಿಭಾಗದಲ್ಲಿ ರಚಿಸಲ್ಪಟ್ಟ Anti drug Team ನ ಅಧಿಕಾರಿ, ಸಿಬ್ಬಂದಿಗಳು ಡಿ.19ರಂದು ಸಂಜೆ 6ಕ್ಕೆ ಅತ್ತಾವರ ಕಟ್ಟೆಯ ಬಳಿ ಪದವಿನಂಗಡಿಯ ವೈಷ್ಣವ್ (24) ಎಂಬಾತನನ್ನು ಗಾಂಜಾ ಸೇವನೆ ಮಾಡಿದ ಆರೋಪದಲ್ಲಿ ಬಂಧಿಸಿದ್ದಾರೆ.
ಡಿ.19ರಂದು ಸಂಜೆ ಕೊಟ್ಟಾರ ಚೌಕಿ ಬಳಿ ಪುತ್ತೂರು ತಾಲೂಕಿನ ನೂಜಿಬಾಳ್ತಿಲ ಬಾಂತಾಜೆ ಗ್ರಾಮದ ರಿತೇಶ್ ಪಿ. (22) ಎಂಬಾತನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
Next Story





