ಮಂಗಳೂರು: ಉದ್ಯಮಿ ಸ್ನೇಹಿತರ ಬಳಗದಿಂದ ಸಾಧಕರಿಗೆ ಸನ್ಮಾನ

ಮಂಗಳೂರು : ಉದ್ಯಮಿ ಸ್ನೇಹಿತರ ಬಳಗದ ವತಿಯಿಂದ ನಗರದ ಮುಳಿಹಿತ್ಲು ಅಬ್ರಾರ್ ಸಭಾಂಗಣದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬುಧವಾರ ನಡೆಯಿತು.
ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಉಮೇಶ್ ಟಿ. ಕರ್ಕೇರ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ ಉಳ್ಳಾಲ ಇದರ ಅಧ್ಯಕ್ಷ ವರದರಾಜ ಬಂಗೇರ ಹಾಗೂ ಸಮಾಜ ಸೇವಕ ಬೋಳೂರು ಆನಂದ ಪುತ್ರನ್ ಅವರನ್ನು ಸನ್ಮಾನಿಸಲಾಯಿತು.
ಸಮಾಜ ಸೇವಕ ಸಿಂಧೂರಾಮ್ ಪುತ್ರನ್, ಅಲ್ಪಸಂಖ್ಯಾತ ಯಾಂತ್ರಿಕ ಮೀನುಗಾರರ ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷ ಎಸ್.ಎಂ. ಬಾಷ ಎಂ.ಡಿ., ಉದ್ಯಮಿಗಳಾದ ವಾಸಿಂ ಹನೀಫ್, ಮೋಹನ್ ಬೆಂಗ್ರೆ, ಮನಪಾ ಸದಸ್ಯ ಜಗದೀಶ್ ಶೆಟ್ಟಿ ಬೋಳೂರು, ಸುಧೀರ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.
ಉದ್ಯಮಿ ಫಾರೂಕ್ ಸ್ವಾಗತಿಸಿದರು. ಸಾನಿಧ್ಯ ಭಿನ್ನ ಸಾಮರ್ಥ್ಯ ವಸತಿ ಶಾಲೆಯ ಆಡಳಿತಾಧಿಕಾರಿ ಡಾ.ವಸಂತ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ಅಧ್ಯಕ್ಷ ಬಿ.ಎಸ್.ಮಹಮ್ಮದ್ ಬಶೀರ್ ವಂದಿಸಿದರು.
Next Story







