‘ಮೇಲ್ತೆನೆ’ ನೂತನ ಅಧ್ಯಕ್ಷರಾಗಿ ಅಶೀರುದ್ದೀನ್ ಮಾಷ್ಟರ್ ಸಾರ್ತಬೈಲ್ ಆಯ್ಕೆ

ದೇರಳಕಟ್ಟೆ: ಬ್ಯಾರಿ ಲೇಖಕರು ಮತ್ತು ಕಲಾವಿದರ ಕೂಟ (ಮೇಲ್ತೆನೆ) ಇದರ 8ನೆ ವಾರ್ಷಿಕ ಸಭೆಯು ನಾಟೆಕಲ್‌ನ ಇ-ಲೈಟ್ ಟ್ಯೂಶನ್ ಸೆಂಟರ್‌ನಲ್ಲಿ ಶುಕ್ರವಾರ ನಡೆಯಿತು.
ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಬಶೀರ್ ಕಲ್ಕಟ್ಟ ಸ್ವಾಗತಿಸಿ, ವಂದಿಸಿದರು. ಕೋಶಾಧಿಕಾರಿ ಹಂಝ ಮಲಾರ್ ಲೆಕ್ಕಪತ್ರ ಮಂಡಿಸಿದರು.
2024ನೆ ಸಾಲಿನ ಗೌರವಾಧ್ಯಕ್ಷರಾಗಿ ಆಲಿಕುಂಞಿ ಪಾರೆ, ನೂತನ ಅಧ್ಯಕ್ಷರಾಗಿ ಅರಬಿಕ್ ಶಿಕ್ಷಕ ಅಶೀರುದ್ದೀನ್ ಮಾಷ್ಟರ್ ಸಾರ್ತಬೈಲ್, ಉಪಾಧ್ಯಕ್ಷರಾಗಿ ಇಸ್ಮಾಯೀಲ್ ಟಿ., ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಮಲಾರ್, ಕಾರ್ಯದರ್ಶಿಯಾಗಿ ಅಶ್ರಫ್ ದೇರಳಕಟ್ಟೆ ಡಿ.ಎ., ಕೋಶಾಧಿಕಾರಿಯಾಗಿ ಇಬ್ರಾಹೀಂ ನಡುಪದವು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಶೀರ್ ಅಹ್ಮದ್ ಕಿನ್ಯ, ಮನ್ಸೂರ್ ಅಹ್ಮದ್ ಸಾಮಣಿಗೆ, ಮುಹಮ್ಮದ್ ಬಾಷಾ ನಾಟೆಕಲ್, ಬಶೀರ್ ಕಲ್ಕಟ್ಟ, ಬಿ.ಎಂ. ಕಿನ್ಯ, ಆಸೀಫ್ ಬಬ್ಬುಕಟ್ಟೆ, ಸಿದ್ದೀಕ್ ಎಸ್.ರಾಝ್, ರಫೀಕ್ ಕಲ್ಕಟ್ಟ, ರಿಯಾಝ್ ಮಂಗಳೂರ ಅವರನ್ನು ಆಯ್ಕೆ ಮಾಡಲಾಯಿತು.
Next Story





