‘ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್’ : ‘ವಿಶ್ವ ವಜ್ರ’ ಡೈಮಂಡ್ ಜ್ಯುವೆಲ್ಲರಿ ಪ್ರದರ್ಶನ ಆರಂಭ

ಮಂಗಳೂರು, ಡಿ.22: ನಗರದ ಕಂಕನಾಡಿಯ ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್’ ಶೋರೂಂನಲ್ಲಿ ‘ವಿಶ್ವ ವಜ್ರ’ ಡೈಮಂಡ್ ಜ್ಯುವೆಲ್ಲರಿ ಪ್ರದರ್ಶನ ಮತ್ತು ಮಾರಾಟದ 12ನೇ ಆವೃತ್ತಿ ಶುಕ್ರವಾರ ಆರಂಭಗೊಂಡಿತು.
ವಜ್ರ ಪ್ರದರ್ಶನವನ್ನು ಚಲನಚಿತ್ರ ನಟಿ ಮತ್ತು ರೂಪದರ್ಶಿ ಆಶಾ ಭಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸುಮಾರು 12 ವರ್ಷಗಳಿಂದ ಸುಲ್ತಾನ್ ಮಳಿಗೆಯು ಯಶಸ್ವಿಯಾಗಿ ಪ್ರದರ್ಶನ ಮೇಳವನ್ನು ಆಯೋಜಿಸಿರುವುದು ಶ್ಲಾಘನೀಯ. ಸಂಸ್ಥೆಯು ವ್ಯಾಪಾರ ವಹಿವಾಟಿನ ಜತೆಗೆ ಸಮಾಜ ಸೇವೆಯಲ್ಲಿ ನಿರತರಾಗಿರುವುದು ಅಭಿನಂದನೀಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ‘ಮಾಸ್ಟರ್ ಶೆಫ್’ ಸ್ಪರ್ಧೆಯ ವಿಜೇತ ಮುಹಮ್ಮದ್ ಆಶಿಕ್ ಮಾತನಾಡಿ, ಸುಲ್ತಾನ್ ಜ್ಯುವೆಲ್ಲರಿಯಲ್ಲಿ ಚಿನ್ನಾಭರಣಗಳ ಅಪೂರ್ವ ಸಂಗ್ರಹವಿದೆ. ಮನೆ ಮಂದಿ ಸದಾ ಸಂಭ್ರಮಿಸುವ ಸೌಲಭ್ಯವು ಇಲ್ಲಿರುವುದು ಸಂತೋಷದ ವಿಚಾರ ಎಂದರು.
ಈ ಸಂದರ್ಭ ಮಾಸ್ಟರ್ ಶೆಫ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಆಶಿಕ್‌ರನ್ನು ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಅಬ್ದುಲ್ ರವೂಫ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಟಿ.ಎಂ. ಅಬ್ದುಲ್ ರಹೀಮ್ ಸನ್ಮಾನಿಸಿದರು.
ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ, ಸುಲ್ತಾನ್ ಗ್ರೂಪ್‌ನ ಜಿಎಂ ಉನ್ನಿಥಾನ್, ನಿರ್ದೇಶಕ ಅಬ್ದುಲ್ ರಿಯಾಝ್, ಪ್ರಾದೇಶಿಕ ವ್ಯವಸ್ಥಾಪಕ ಸುಮೇಶ್, ಡೈಮಂಡ್ಸ್ ಮ್ಯಾನೇಜರ್ ಅರುಣ್, ಶಾಖಾ ಮುಖ್ಯಸ್ಥ ಅಬ್ದುಲ್ ಸತ್ತಾರ್, ಹಿರಿಯ ವ್ಯವಸ್ಥಾಪಕ ಕೆ.ಎಸ್. ಮುಸ್ತಫ ಕಕ್ಕಿಂಜೆ, ವ್ಯವಸ್ಥಾಪಕರಾದ ಲಿಕ್ಸನ್ ದೇವಸ್ಸಿ, ರಾಕೇಶ್, ಇಫ್ತಿಕರ್ ಉಪಸ್ಥಿತರಿದ್ದರು. ಸಾಹಿಲ್ ಝಹೀರ್ ಕಾರ್ಯಕ್ರಮ ನಿರೂಪಿಸಿದರು.
*ವಜ್ರ ಆಭರಣ ಪ್ರದರ್ಶನದಲ್ಲಿ ಇಟಲಿ, ಫ್ರಾನ್ಸ್, ಟರ್ಕಿ, ಬೆಲ್ಜಿಯಂ, ಯುಎಸ್, ಸಿಂಗಾಪುರ್ ಮತ್ತು ಮಧ್ಯಪ್ರಾಚ್ಯದಿಂದ ಪ್ರಮಾಣೀಕೃತ ಡೈಮಂಡ್ ಮತ್ತು ಪೋಲ್ಕಿ, ಡೈಮಂಡ್ ಆಭರಣ ಸಂಗ್ರಹಗಳ 10,000 ಕ್ಯಾರೆಟ್ ಸಂಗ್ರಹವಿದೆ. ಸಾಲಿಟೇರ್ ಕಲೆಕ್ಷನ್, ಸಾಂಪ್ರದಾಯಿಕ ಕ್ಲೋಸ್ ಸೆಟ್ಟಿಂಗ್ ಡೈಮಂಡ್ ಜ್ಯುವೆಲ್ಲರಿ, ತನ್ಮಾನಿಯಾ ಸಂಗ್ರಹಗಳು, ವಧುವಿನ ವಜ್ರ ಆಭರಣ ಸಂಗ್ರಹಗಳು, ಕತ್ತರಿಸದ ವಜ್ರಗಳು ಮತ್ತು ರೂಬಿ ಎಮರಾಲ್ಡ್ ರತ್ನದ ಸಂಗ್ರಹಗಳು ಮತ್ತು ಕೈಗೆಟುಕುವ ದೈನಂದಿನ ವಜ್ರದ ಸಂಗ್ರಹಣೆಗಳು ಇವೆ ಎಂದು ಡಾ.ಅಬ್ದುಲ್ ರವೂಫ್ ಮತ್ತು ಟಿಎಂ ಅಬ್ದುಲ್ ರಹೀಮ್ ತಿಳಿಸಿದರು.
*80,000 ರೂ.ಗಳಿಂದ ಪ್ರಾರಂಭವಾಗುವ ಡೈಲಿ ವೇರ್ ಲೈಟ್‌ವೇಟ್ ಡೈಮಂಡ್ ನೆಕ್ಲೆಸ್‌ಗಳು, 35 ಸಾವಿರ ರೂ.ಗಳಿಂದ ಪ್ರಾರಂಭವಾಗುವ ಲೈಟ್‌ವೇಟ್ ಡೈಮಂಡ್ ಬ್ಯಾಂಗಲ್, 8,000 ರೂ.ಗಳಿಂದ ಪ್ರಾರಂಭವಾಗುವ ಡೈಮಂಡ್ ರಿಂಗ್‌ಗಳು ಲೈಟ್ ವೇಟ್ ಸಂಗ್ರಹಗಳಲ್ಲಿ ಲಭ್ಯವಿದೆ. ಗ್ರಾಹಕರು ಪ್ರತಿ ಡೈಮಂಡ್ ಕ್ಯಾರೆಟ್‌ಗೆ ಫ್ಲಾಟ್ 8,000 ರೂ. ರಿಯಾಯಿತಿ ಯನ್ನು 2024ರ ಜನವರಿ 7ರೊಳಗೆ ಕಂಕನಾಡಿಯ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.







