ರಕ್ತದಾನ ಜೀವ ಉಳಿಸುವ ಮಹತ್ವದ ಕಾರ್ಯ: ರಮಾನಾಥ ರೈ

ಬಂಟ್ವಾಳ : ಜಿಸ್ತಿ ಕಮಿಟಿ ಸುನ್ನೀ ಮಹಲ್ ಕೈಯ್ಯೂರ್, ಕೆ.ಎಂ.ಜೆ, ಎಸ್.ವೈ.ಎಸ್, ಎಸ್ಸೆಸ್ಸೆಫ್ ಮಂಚಿ ಕೊಳ್ನಾಡು ಹಾಗೂ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಇದರ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸುನ್ನಿ ಮಹಲ್ ಅಜ್ಮೀರ್ ಆಂಡ್ ನೇರ್ಚೆ ಪ್ರಚಾರಾರ್ಥಕವಾಗಿ ಅಕ್ಷಯ ಬ್ಲಡ್ ಡೋನರ್ಸ್ ಇದರ 28 ನೇ ರಕ್ತದಾನ ಶಿಬಿರವು ಕೈಯ್ಯೂರ್ ಸುನ್ನೀ ಮಹಲ್ ನಲ್ಲಿ ರವಿವಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ ರಕ್ತದಾನ ಕೇವಲ ಒಂದು ಜೀವವನ್ನು ಉಳಿಸುವುದರ ಜೊತೆಗೆ ಮಾನವೀಯತೆಯ ಸಂದೇಶಗಳನ್ನು ಸಾರುತ್ತದೆ. ಯಾವುದೇ ಧರ್ಮ, ಜಾತಿ, ಬೇಧವಿಲ್ಲದೆ ನೀವು ದಾನ ಮಾಡಿದ ಪ್ರತಿಯೊಂದು ರಕ್ತದ ಹನಿಗಳು ಒಂದು ಜೀವಕ್ಕೆ ಉಡುಗೊರೆಯಾಗುತ್ತದೆ ವಿನಃ ರಕ್ತ ಎಲ್ಲಿಯೂ ವ್ಯಾಪಾರೀಕರಣ ಆಗಲು ಸಾಧ್ಯವಿಲ್ಲ. ರಕ್ತದಾನವು ಜೀವ ಉಳಿಸುವಂತಹ ಮಹತ್ವವಾದ ಕಾರ್ಯವಾಗಿದೆ ಎಂದರು.
ಸಿ.ಯಂ ಅಬೂಬಕ್ಕರ್ ಲತೀಫ್ ಎಣ್ಮೂರು ಉಸ್ತಾದ್ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಡಾ. ಲಯನ್ ಗೋಪಾಲ ಆಚಾರ್ಯ ಉದ್ಘಾಟಿಸಿದರು.
ಕೆಪಿಸಿಸಿ ಸದಸ್ಯರು ಮತ್ತು ಅಕ್ಷಯ ಚಾರಿಟೇಬಲ್ ಟ್ರಸ್ಟ್ ಇದರ ಗೌರವಧ್ಯಕ್ಷರಾದ ಎಂ.ಎಸ್ ಮಹಮ್ಮದ್, ದ.ಕ. ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ ಬೊಳಂತೂರು, ಮಂಚಿ ಪ್ರೌಢ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಲಯನ್ಸ್ ಕ್ಲಬ್ ಬಪ್ಪನಾಡು ವಲಯಾಧ್ಯಕ್ಷ ಪ್ರತಿಭಾ ಹೆಬ್ಬಾರ್, ಸದಸ್ಯರಾದ ಬಾಸ್ಕರ ಕಾಂಚನ್, ಜಗಮೋಹನ್ ಮುಲ್ಕಿ , ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ ಜಿಲ್ಲಾಧ್ಯಕ್ಷ ಝಕರಿಯಾ ನಾರ್ಶ, ಎಸ್ ವೈ ಎಸ್ ಮಂಚಿ ಸ್ವಾಂತ್ವಾನ ಕಾರ್ಯದರ್ಶಿ ಹಂಝ ಮಂಚಿ, ಸುನ್ನಿ ಮಹಲ್ ಮುದರ್ರಿಸ್ ಸಾಲಿಂ ಸಅದಿ, ಸುನ್ನಿ ಮಹಲ್ ಸಂಸ್ಥೆಯ ಕಾರ್ಯದರ್ಶಿ ರಝಾಕ್ ಭಾರತ್, ಕೆಪಿಸಿಸಿ ಸಂಯೋಜಕ ಚಿತ್ತರಂಜನ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ನವಾಝ್ ಬಡಕಬೈಲು, ಮಂಚಿ ಕೊಲ್ನಾಡು ಜುಮಾ ಮಸೀದಿ ಖತೀಬ್ ಅಬ್ದುಲ್ ರಝಾಕ್ ಸಖಾಫಿ, ಎಸ್ಸೆಸ್ಸೆಫ್ ಮುಖಂಡ ಅಸ್ಲಂ ಪಂಜಿಕಲ್ಲು, ಎಸ್ಸೆಸ್ಸೆಫ್ ಬಂಟ್ವಾಳ ಡಿವಿಜನ್ ಕಾರ್ಯದರ್ಶಿ ಲುಕ್ಮಾನ್ ಕುಕ್ಕಾಜೆ, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹೀಂ ಮಂಚಿ, ಬೊಳಂತೂರು ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್ ಸುರಿಬೈಲ್, ಅನ್ಸಾರ್ ಬಿ.ಜಿ., ಸಾಲೆತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಸೈನಾರ್ ಕಟ್ಟತ್ತಿಲ, ಜಮೀಯ್ಯತುಲ್ ಉಲಮಾ ಬಂಟ್ವಾಳ ಝೋನ್ ಕಾರ್ಯದರ್ಶಿ ರಫೀಕ್ ಝುಹುರಿ ಮಂಚಿ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಉಮ್ಮರ್, ಝುಬೈರ್ ಸಂಪಿಲ, ಸಾದಿಕ್ ನಾರ್ಶ, ಉಪ್ಪ ಕುಂಞ ಕುಲ್ಯಾರ್, ಹಾಗೂ ಶರೀಫ್ ಕುಲ್ಯಾರ್ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಮಾಜಿ ಸಚಿವ ಬಿ. ರಮಾನಾಥ ರೈ ಅವರನ್ನು ಸನ್ಮಾನಿಸಲಯಿತು. ಶಿಬಿರದಲ್ಲಿ 49 ಶಿಬಿರಾರ್ಥಿಗಳು ರಕ್ತದಾನ ಮಾಡಿ ಜೀವದಾನಿಯಾಗಿರುತ್ತಾರೆ. ಅಕ್ಷಯ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಇಬ್ರಾಹೀಂ ಕರೀಂ ಕದ್ಕಾರ್ ಸ್ವಾಗತಿಸಿ, ವಂದಿಸಿದರು.







