ಅಮೆಮ್ಮಾರ್: 'ಮುಸಾಬಕ' ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ

ಫರಂಗಿಪೇಟೆ: ಸಮಸ್ತ ಕೇರಳ ಜಂ- ಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ನಿರ್ದೇಶನ ಪ್ರಕಾರ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ 'ಮುಸಾಬಕ' ಇಸ್ಲಾಮಿಕ್ ಸಾಹಿತ್ಯ ಕಲಾ ಸ್ಪರ್ಧೆ ಜಂ-ಇಯ್ಯತುಲ್ ಮಅಲ್ಲಿಮೀನ್ ಹಾಗೂ ಮದ್ರಸ ಮೆನೇಜ್ಮೆಂಟ್ ಫರಂಗಿಪೇಟೆ ರೇಂಜ್ ವತಿಯಿಂದ ರವಿವಾರ ಅಮೆಮ್ಮಾರ್ ಬದ್ರಿಯಾ ಮದ್ರಸ ವಠಾರದಲ್ಲಿ ನಡೆಯಿತು.
15 ಮದ್ರಸದ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು 10 ತೀರ್ಪುಗಾರರ ಸಮ್ಮುಖದಲ್ಲಿ 3 ವೇದಿಕೆಯಲ್ಲಿ 84 ಕಲಾ ಸಾಹಿತ್ಯ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಚಾಂಪಿಯನ್ ಪ್ರಶಸ್ತಿಯನ್ನು ಅಮೆಮ್ಮಾರ್ ಮದ್ರಸ ಸ್ಥಾನ ಪಡೆದರೆ ದ್ವಿತೀಯ ತುಂಬೆ ಮದ್ರಸ, ತೃತೀಯ ಮಾರಿಪ್ಪಳ್ಳ ಮದ್ರಸ ಸ್ಥಾನ ಪಡೆಯಿತು ಹಾಗೂ ವಿವಿಧ ಮದ್ರಸದ ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು.
ಅಮೆಮ್ಮಾರ್ ಮಸೀದಿ ಅಧ್ಯಕ್ಷ ಉಮರಬ್ಬ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಅಮೆಮಾರ್ ಮದ್ರಸ ಸದರ್ ಮುಅಲ್ಲಿಮ್ ಅಬೂಬಕ್ಕರ್ ಸಿದ್ದೀಕ್ ದಾರಿಮಿ ಉದ್ಘಾಟನೆಗೈದರು, ಫರಂಗಿಪೇಟೆ ಮಸೀದಿ ಖತೀಬ್ ದುವಾ ಅಶಿರ್ವಚನಗೈದರು.
ಸ್ವಾಗತ ಸಮಿತಿ ಅಧ್ಯಕ್ಷ ಮದ್ರಸ ಮೆನೆಜ್ಮೆಂಟ್ ಎಸೋಸಿಯೇಷನ್ ಅಧ್ಯಕ್ಷ ಹಸನಬ್ಬ ಗುಡ್ಡೆಮನೆ, ಅಮೆಮ್ಮಾರ್ ಮಸೀದಿ ಖತೀಬ್ ಇರ್ಫಾನ್ ಫೈಝಿ, ತುಂಬೆ ಮಸೀದಿ ಖತೀಬ್ ಅಬೂಸ್ವಾಲಿಹ್ ಫೈಝಿ, ಎಸ್ಕೆಎಸ್ಎಫ್ ರಾಜ್ಯ ಸಮಿತಿ ಸದಸ್ಯ ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಜಿಲ್ಲಾ ಮದ್ರಸ ಮೆನೆಜ್ಮೆಂಟ್ ಅಧ್ಯಕ್ಷ ಎಮ್ಎಚ್ ಮೊಯಿದಿನ್, ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ, ಕುಂಜತ್ಕಳ ಮಸೀದಿ ಅಧ್ಯಕ್ಷ ಅಶ್ರಫ್, ಮಾರಿಪ್ಪಳ್ಳ ಮಸೀದಿ ಉಪಾಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ, ಕುಂಪನಮಾಜಲ್ ಮಸೀದಿ ಅಧ್ಯಕ್ಷ ಬುಖಾರಿ, ಮುಫತ್ತಿಶ್ ಉಮರ್ ದಾರಿಮಿ, ಮದ್ರಸ ಮೆನೆಜ್ಮೆಂಟ್ ಎಸೋಸಿಯೇಷನ್ ಫರಂಗಿಪೇಟೆ ರೇಂಜ್ ಕಾರ್ಯದರ್ಶಿ ಸೆಲೀಮ್ ಕುಂಪನಮಜಲ್, ಮದ್ರಸ ಮೆನೆಜ್ಮೆಂಟ್ ಮಿತ್ತಬೈಲ್ ರೇಂಜ್ ಕಾರ್ಯದರ್ಶಿ ಇಕ್ಬಾಲ್, ತೀರ್ಪುಗಾರರಾದ ಉಮರ್ ದಾರಿಮಿ, ಅಮೆಮಾರ್ ಮಸೀದಿ ಜೊತೆ ಕಾರ್ಯದರ್ಶಿ ಮೊಹಮ್ಮದ್ ಶಾಫಿ ಉಪಸ್ಥಿತರಿದ್ದರು. ಖಾಸಿಮ್ ಅರ್ಷದಿ ಸ್ವಾಗತಿಸಿದರು ಶುಹೈಬ್ ಚಾಪಲ್ಲ ನಿರೂಪಿಸಿದರು. ಎಪಿ ಅಶ್ರಫ್ ಮುಸ್ಲಿಯಾರ್ ವಂದಿಸಿದರು.







