ದ್ವೇಷ ಭಾಷಣ: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲಿಸಲು ಮುಸ್ಲಿಮ್ ಒಕ್ಕೂಟ ಆಗ್ರಹ

ಮಂಗಳೂರು: ಮುಸ್ಲಿಮ್ ಮಹಿಳೆಯರನ್ನು ಉದ್ದೇಶಿಸಿ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲಿಸಿಲು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಆಗ್ರಹಿಸಿದ್ದಾರೆ.
ಕಲ್ಲಡ್ಕ ಭಟ್ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ, ಮತೀಯ ಉದ್ವಿಗ್ನತೆ ಸೃಷ್ಟಿಸುವ ಮತ್ತು ಮತೀಯ ಗಲಭೆಗಳನ್ನು ಹುಟ್ಟು ಹಾಕುವ ರೀತಿಯ ಹೇಳಿಕೆ ನೀಡಿರುತ್ತಾರೆ. ಪೊಲೀಸರು, ಸರಕಾರ ಮತ್ತು ಜಿಲ್ಲಾಡಳಿತ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪ್ರಕರಣ ದಾಖಲುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಸರಕಾರ ಮತ್ತು ಪೊಲೀಸರೇ ಹೊಣೆ. ಕಲ್ಲಡ್ಕ ಭಟ್ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಸ್ಟೇಷನ್‌ನಲ್ಲಿ ಈ ಬಗ್ಗೆ ದೂರು ನೀಡಲಾಗಿದೆ. ನಿಯೋಗದಲ್ಲಿ ಅಬ್ದುಲ್ ಜಲೀಲ್, ಅಶ್ರಫ್ ಬದ್ರಿಯಾ, ಸಾಲಿಹ್ ಬಜ್ಪೆ, ಹಿದಾಯತ್ ಮಾರಿಪಲ್ಲ, ಹಿದಾಯತ್ ಕೃಷ್ಣಾಪುರ, ಮೊಹಮ್ಮದ್ ಹನೀಫ್.ಯು, ವಿ.ಎಚ್. ಕರೀಮ್, ಸೋಶಿಯಲ್ ಫಾರೂಕ್ ಮತ್ತಿತರು ಉಪಸ್ಥಿತರಿದ್ದರು.





