ಮುಕ್ಕಚೇರಿ: ಮದ್ರಸ ವಿದ್ಯಾರ್ಥಿಗಳಿಂದ ಪ್ರತಿಭಾ ಸ್ಪರ್ಧೆ
ಮಂಗಳೂರು : ಕರ್ನಾಟಕ ಸಲಫಿ ಎಸೋಸಿಯೇಷನ್, ಮಂಗಳೂರು ಇದರ ಅಧೀನ ಸಂಸ್ಥೆ KSA ಶಿಕ್ಷಣ ಮಂಡಳಿಯ ಸಂಯೋಜಿತ ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆಯು ಉಳ್ಳಾಲ-ಮುಕ್ಕಚೇರಿಯ ಅಲ್ ಮನಾರ್ ಅರಬಿಕ್ ಮದ್ರಸದಲ್ಲಿ ಇತ್ತೀಚೆಗೆ ಜರಗಿತು.
ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ವಿವಿಧ ಮದ್ರಸಗಳ ನೂರಾರು ವಿದ್ಯಾರ್ಥಿಗಳು ವಿವಿಧ ಇಸ್ಲಾಮಿ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಅಲ್ ಮನಾರ್ ಅರಬಿಕ್ ಮದ್ರಸ, ಮುಕ್ಕಚೇರಿ ಸಮಗ್ರ (ಚಾಂಪಿಯನ್) ಪ್ರಥಮ ಪ್ರಶಸ್ತಿ ಪಡೆಯಿತು. ಸಲಫಿ ಮದ್ರಸ ಸುಂಠಿಕೊಪ್ಪ ಸಮಗ್ರ ದ್ವಿತೀಯ ಪ್ರಶಸ್ತಿ ಪಡೆಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಎಂದು KSA ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಹಸೈನಾರ್ ಸ್ವಲಾಹಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





