‘‘ತುಳುನಾಡ ಕೇಸರಿ’’ ಪ್ರಶಸ್ತಿ ಗೆದ್ದ ಅನನ್ಯ ಅಮೀನ್ ಬೆಂಗ್ರೆ

ಮಂಗಳೂರು, ಡಿ.28: ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಮೃತ ಮಹೋತ್ಸವ ಅಂಗವಾಗಿ ದಕ್ಷಿಣ ಕನ್ನಡ ಅಮೆಚೂರ್ ಕುಸ್ತಿ ಸಂಘ ಸಹಭಾಗಿತ್ವದಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ ‘‘ತುಳುನಾಡ ಕೇಸರಿ’’ ಪ್ರಶಸ್ತಿಯನ್ನು ಅನನ್ಯ ಅಮೀನ್ ಬೆಂಗ್ರೆ ಅವರು ಗೆದ್ದುಕೊಂಡಿದ್ದಾರೆ.
ಅವರು ಬೆಂಗ್ರೆ ವೀರ ಮಾರುತಿಯ ವ್ಯಾಯಾಮ ಶಾಲೆಯನ್ನು ಪ್ರತಿನಿಧಿಸಿದ್ದರು. ತುಳುನಾಡ ಕೇಸರಿ ದಿ. ಮೋಹನ್ ಕರ್ಕೇರ ಕುಸ್ತಿ ಅಖಾಡದಲ್ಲಿ ಡಿ.24ರಂದು ಕುಸ್ತಿ ಪಂದ್ಯಾಟ ನಡೆದಿತ್ತು.
Next Story





