ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕ್ರಮಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿ ಮನವಿ

ಮಂಗಳೂರು: ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್‌ರ ನಿರ್ದೇಶನ ದಂತೆ ಕಮಿಟಿಯ ನಿಯೋಗವು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಕಲ್ಲಡ್ಕ ಪ್ರಭಾಕರ ಭಟ್ ಇನ್ನೂ ಕೂಡಾ ಶಾಂತಿ ಕದಡುವ ಸಾಧ್ಯತೆ ಇರುವುದರಿಂದ ರೌಡಿ ಶೀಟ್ ಪಟ್ಟಿಗೆ ಸೇರಿಸಿ ಕರಾವಳಿ ಜಿಲ್ಲೆಯನ್ನು ಪ್ರವೇಶಿಸದಂತೆ ಗಡಿಪಾರು ಆದೇಶ ಹೊರಡಿಸಬೇಕು. ಕಲ್ಲಡ್ಕ ಭಟ್‌ಗೆ ಸರಕಾರ ನೀಡಿರುವ ಅಂಗರಕ್ಷಕರನ್ನು ವಾಪಾಸ್ ಪಡೆಯಬೇಕು. ಕಲ್ಲಡ್ಕ ಭಟ್‌ರ ಬೆಂಬಲಿಗರ ಮೇಲೆ ತೀವ್ರ ನಿಗಾ ಇಡಬೇಕು, ಮುಂದಿನ ಲೋಕಸಭಾ ಚುಣಾವನೆ ಹಿನ್ನಲೆಯಲ್ಲಿ ಜಿಲ್ಲೆಯ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸಗಳನ್ನು ಮಾಡುವ ಸಾಧ್ಯತೆ ಇರುವುದರಿಂದ ಕಲ್ಲಡ್ಕ ಭಟ್ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಕಮಿಟಿಯ ಉಪಾಧ್ಯಕ್ಷರಾದ ಹಾಜಿ ಬಿ.ಎಂ. ಮುಮ್ತಾಝ್ ಅಲಿ, ಕೆ. ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಹಾಜಿ ಬಿ.ಅಬೂಬಕ್ಕರ್, ಡಾ. ಮುಹಮ್ಮದ್ ಆರೀಫ್ ಮಸೂದ್, ಡಿ.ಎಂ. ಅಸ್ಲಂ, ಹಾಜಿ ಮಕ್ಬೂಲ್ ಅಹ್ಮದ್, ಸಿ.ಎಂ. ಹನೀಫ್, ಬಿ.ಎಸ್. ಇಮ್ತಿಯಾಝ್, ಅನ್ವರ್ ರಿಕೋ, ಎಸ್.ಎ. ಖಲೀಲ್ ಅಹ್ಮದ್, ಅಬ್ಬಾಸ್ ಉಚ್ಚಿಲ್, ಸಂಶುದ್ದೀನ್ ಕಂಡತ್ತ್ ಪಳ್ಳಿ, ಇಕ್ಬಾಲ್ ಅಹ್ಮದ್ ಮುಲ್ಕಿ ನಿಯೋಗದಲ್ಲಿದ್ದರು.





