ಸುಳ್ಯ: ಪಯಸ್ವಿನಿ ನದಿಯಲ್ಲಿ ನೀರಿನಲ್ಲಿ ಮುಳುಗಿ ಯುವಕ ಮೃತ್ಯು

ಸಮೀರ್
ಸುಳ್ಯ: ಭಸ್ಮಡ್ಕ ಸಮೀಪ ಪಯಸ್ವಿನಿ ನದಿಯಲ್ಲಿ ಮುಳುಗಿ ಯುವಕ ಮೃತಪಟ್ಟ ಘಟನೆ ರವಿವಾರ ನಡೆದಿದೆ.
ಕಾಸರಗೋಡಿನ ವರ್ಕಾಡಿಯ ಸಮೀರ್ (26) ಮೃತಪಟ್ಟ ಯುವಕ.
ಸುಳ್ಯದ ಕುರುಂಜಿಭಾಗ್ನಲ್ಲಿರುವ ವಿಶನ್ ಆಪ್ಟಿಕಲ್ಸ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಯುವಕ ಸುಳ್ಯದಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದರು. ರವಿವಾರ ರಜೆ ಇದ್ದ ಹಿನ್ನಲೆಯಲ್ಲಿ ಬಟ್ಟೆ ಒಗೆಯಲು ನದಿಗೆ ಬಂದ ಇತರ ಇಬ್ಬರು ಯುವಕರ ಜೊತೆಗೆ ನೀರಿಗೆ ಇಳಿದಿದ್ದರು. ಈ ಸಂದರ್ಭ ಸಮೀರ್ ನೀರಿನಲ್ಲಿ ಮುಳುಗಿದ್ದಾರೆ. ಕೂಡಲೇ ಸುಳ್ಯ ಆರಕ್ಷಕ ಠಾಣೆ ಸಿಬ್ಬಂದಿ, ಅಗ್ನಿಶಾಮಕ ದಳ, ಪೈಚಾರಿನ ಮುಳುಗು ತಜ್ಞರು ಶೋಧ ನಡೆಸಿ ಮೃತ ದೇಹವನ್ನು ಪತ್ತೆ ಹಚ್ಚಿ ಹೊರ ತೆಗೆದರು. ಸುಳ್ಯ ಠಾಣೆಯಲ್ಲಿ ಕೇಸು ದಾಖಲಾಗಿದೆ.
Next Story





