ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರ್‌ಗೆ ಪ್ರಶಸ್ತಿ ಪ್ರದಾನ

ಮಂಗಳೂರು: ಭಾರತ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ (ರಿ) ಇದರ 2023 ನೇ ಸಾಲಿನ 9ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಮತ್ತು ಬಿಎಸ್‌ಡಬ್ಲ್ಯುಟಿ ವರ್ಷದ ವ್ಯಕ್ತಿ-23 ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಶನಿವಾರ ನಗರದ ವಿವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಿತು.
ಮಂಗಳೂರು ವಿವಿ ಕುಲಪತಿ ಡಾ. ಜಯರಾಜ್ ಅಮೀನ್ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಮಂಗಳೂರು ವಿವಿಯ ನಿವೃತ್ತ ಅಧೀಕ್ಷಕ ಹರೀಶ್ ಕುಮಾರ್ ಕುತ್ತಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದದರು.
ಬಿಎಸ್‌ಡಬ್ಲ್ಯುಟಿ ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಕೃತಘ್ನ ಸಮಾಜಕ್ಕೆ ಎಷ್ಟು ಕೊಟ್ಟರೂ ಅಷ್ಟೇ. ಪತ್ರಿಕೋದ್ಯಮ ಜೀವನ ಸಾಕು ಎನಿಸುವಾಗಲೇ ಇಂತಹ ಸಜ್ಜನರು ನೀಡುವ ಪ್ರಶಸ್ತಿಗಳು ನಮ್ಮಲ್ಲಿ ಸ್ಫೂರ್ತಿ ತುಂಬುತ್ತದೆ. ಸಮಾಜಕ್ಕಾಗಿ ಇನ್ನು ಕೂಡಾ ಸೇವೆ ಮಾಡಬೇಕು, ಸುಮ್ಮನೆ ಇರಬಾರದು, ಹೋರಾಟ ಮಾಡಬೇಕು ಎಂದು ಅನಿಸುತ್ತಿದ ಎಂದರು.
ಮುಖ್ಯ ಅತಿಥಿಯಾಗಿ ಮಿಲಾಗ್ರಿಸ್ ಪಿಯು ಕಾಲೇಜಿನ ಪ್ರಾಂಶುಪಾಲ ಮೆಲ್ವಿನ್ ವಾಸ್, ಗೋಕರ್ಣನಾಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಆಶಾಲತಾ ಮಾತನಾಡಿದರು.
ಬಿಎಸ್‌ಡಬ್ಲ್ಯುಟಿ ಮಂಗಳೂರು ಅಧ್ಯಕ್ಷ ಎನ್. ಅಮೀನ್ ಸ್ವಾಗತಿಸಿದರು. ಶಿಕ್ಷಕಿ ಲಾವಣ್ಯ ಸುದರ್ಶನ್ ತಂಡದಿಂದ ಗುಂಪು ಗಾಯನ ನೆರವೇರಿತು. ಡಾ. ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.





