ಮೂಡುಬಿದಿರೆ: ಅಲ್-ಫುರ್ಕಾನ್ ಸ್ಕೂಲ್‌ನಲ್ಲಿ ‘ಬ್ಲೂಮಿಂಗ್ ಟ್ಯಾಲೆಂಟ್ಸ್’ ಕಾರ್ಯಕ್ರಮ

ಮೂಡುಬಿದಿರೆ: ಅಲ್-ಫುರ್ಕಾನ್ ಇಸ್ಲಾಮೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಬ್ಲೂಮಿಂಗ್ ಟ್ಯಾಲೆಂಟ್ಸ್’ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
"ನಮ್ಮ ಮಕ್ಕಳೆ ನಮ್ಮ ಭವಿಷ್ಯ, ನಮ್ಮ ಸಂಸ್ಕೃತಿಯನ್ನು ಉಳಿಸುವುದು ಅಗತ್ಯ" ಎನ್ನುತ್ತಾ ಸಾಮಾಜಿಕ ಪಿಡುಗು ಸಮಾಜವನ್ನು ಹೇಗೆ ಹಾಳು ಮಾಡುತ್ತದೆ ಎಂದು ಮಾತನಾಡಿದ ಶಾಹಿನ್ ಸಮೂಹ ಸಂಸ್ಥೆಯ ಅಧ್ಯಕ್ಷರು ಡಾ. ಅಬ್ದುಲ್ ಖಾದಿರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ಕಾರ್ಯಕ್ರಮದ ಅತಿಥಿಯಾದ ಡಾ. ತಾರಿಕ್ ಸಫೀಉರಹ್ಮಾನ್ ಮುಬಾರಕ್ ಪುರಿ ಮದನಿಯವರು ಮಾತನಾಡಿ ಸಂಸ್ಥೆ ಎಷ್ಟೇ ಜವಾಬ್ದಾರಿ ಪೋಷಕರಿಗೂ ಇದೆ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ಅರಿತು ಜವಾಬ್ದಾರಿತವಾಗಿ ನಡೆಯುವುದು ಅಗತ್ಯ ಎಂದರು.
ಸಂಸ್ಥೆಯ ಆಡಳಿತ ಅಧಿಕಾರಿ ಮೊಹಮ್ಮದ್ ಶಹಾಂ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಅಬ್ದುಲ್ ಜಬ್ಬಾರ್ ರವರು ಶೈಕ್ಷಣಿಕ ಸಾಧನೆಗಳ ವರದಿ ಮಂಡಿಸಿದರು.
ಸಂಸ್ಥೆಯ ಚೇರ್ಮನ್ ರವರ ಸಂದೇಶವನ್ನು ಅವರ ಪರವಾಗಿ ಸಂಸ್ಥೆಯ ಸದಸ್ಯ ಮುಸಾಬ್ ಮಾತನಾಡಿ ಸಂಸ್ಥೆಯ ನಿರಂತರ ಅಭಿವೃದ್ಧಿಗೆ ಶ್ರಮಿಸಿದ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದು ಸಂದೇಶ ರವಾನಿಸಿದರು.
ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಾಹನ ಚಾಲಕರಿಗೆ, ಕ್ರೀಡಾ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳನ್ನು ಹಾಗೂ ತರಬೇತುದಾರರನ್ನು ಮತ್ತು ಶೈಕ್ಷಣಿಕ ವಿಭಾಗದಲ್ಲಿ ಸಾಧನೆಗೈದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಜಮುದ್ದೀನ್ ಅಸ್ಸಾದಿ ಸಂಸ್ಥೆಯ ಉಪಾದ್ಯಕ್ಷರು, ಡಾ. ಅಬ್ದುಲ್ ಬಾಸಿತ್, ಮುಹಮ್ಮದ್ ಹನೀಫ್ ಪಿ.ಎಸ್., ಸಂಸ್ಥೆಯ ಕಾರ್ಯದರ್ಶಿ ಯು.ಟಿ ಅಹ್ಮದ್ ಶರೀಫ್, ಖಜಾಂಜಿ ಮುಹಮ್ಮದ್ ಅಶ್ಫಾಕ್ , ಅರೆಬಿಕ್ ಕಾಲೇಜಿನ ಪ್ರಾಂಶುಪಾಲರಾದ ಶೇಖ್ ಮುಸವಿರ್ ಮದನಿ ಉಪಸ್ಥಿತರಿದ್ದರು. ಶಿಕ್ಷಕ ಮುಹಮ್ಮದ್ ನಾಸಿರ್ ಕಾರ್ಯಕ್ರಮ ನಿರೂಪಿಸಿದರು.







