ಎಸ್‌ವೈಎಸ್ ಸಮ್ಮೇಳನ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಆಹ್ವಾನ

ಮಂಗಳೂರು : ನಗರದಲ್ಲಿ ಜ.24ರಂದು ನಡೆಯಲಿರುವ ಎಸ್‌ವೈಎಸ್ 30ನೇ ವಾರ್ಷಿಕ ಮಹಾಸಮ್ಮೇಳನಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ರಾಜ್ಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮೌಲಾನ ಶಾಫಿ ಸಅದಿ ನೇತೃತ್ವದ ನಿಯೋಗವು ಮನವಿ ಸಲ್ಲಿಸಿತು.
ಈ ಸಂದರ್ಭ ಎಸ್‌ವೈಎಸ್ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಳ್ ಸಅದಿ ಕೊಡಗು, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಪ್ರಧಾನ ಕಾರ್ಯದರ್ಶಿ ಎಂಬಿ ಮುಹಮ್ಮದ್ ಸಾದಿಕ್ ಮಲೆಬೆಟ್ಟು, ಸಮ್ಮೇಳನದ ಸ್ವಾಗತ ಸಮಿತಿಯ ಕನ್ವೀನರ್ ಅಶ್ರಫ್ ಕಿನಾರ ಮಂಗಳೂರು, ಉಪಾಧ್ಯಕ್ಷ ಜೆಎಸ್ ಮುಹಮ್ಮದ್ ಅಲಿ ಸಕಲೇಶಪುರ, ಎಸ್‌ವೈಎಸ್ ಕಾರ್ಯದರ್ಶಿ ಹಸೈನಾರ್ ಆನೆಮಹಲ್, ಅಬ್ದುರ‌್ರಹ್ಮಾನ್ ರಝ್ವಿ ಕಲ್ಕಟ್ಟ, ರಾಜ್ಯ ಸಮಿತಿಯ ಸದಸ್ಯರಾದ ನಾಸಿರ್ ಕ್ಲಾಸಿಕ್ ಬೆಂಗಳೂರು, ಇಬ್ರಾಹೀಂ ಸಖಾಫಿ ಪಯೊಟ, ಇಸ್ಮಾಯಿಲ್ ಸಅದಿ ಕಿನ್ಯ, ಚಿಕ್ಕಮಗಳೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಶಾಹಿದ್ ರಝ್ವಿ, ಜುನೈದ್ ರಝ್ವಿ ಹಾಸನ ಉಪಸ್ಥಿತರಿದ್ದರು.
Next Story





