ಹಳೆಯಂಗಡಿ: ಅಬ್ದುಲ್ ರಝಾಕ್ ಮೂಡುತೋಟ ಸಾಗ್ ರಿಗೆ "ವರ್ಷದ ಹಿರಿಯ ವ್ಯಕ್ತಿ" ಪ್ರಶಸ್ತಿ ಪ್ರದಾನ

ಮುಲ್ಕಿ, ಜ.31: ಹಳೆಯಂಗಡಿ ವಲಯ ಮುಸ್ಲಿಮ್ ಜಮಾಅತ್ ಒಕ್ಕೂಟ ವತಿಯಿಂದ ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅವರಿಗೆ ನೀಡಲ್ಪಡುವ "ವರ್ಷದ ಹಿರಿಯ ವ್ಯಕ್ತಿ" ಪ್ರಶಸ್ತಿಗೆ ಹಳೆಯಂಗಡಿ ಗ್ರಾಮದ ಅಬ್ದುಲ್ ರಝಾಕ್ ಮೂಡುತೋಟ ಸಾಗ್ ಆಯ್ಕೆಯಾಗಿದ್ದಾರೆ.
2023ರ ಡಿ.31ರಂದು ಹಳೆಯಂಗಡಿ ಕದಿಕೆ ದರ್ಗಾ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಹಳೆಯಂಗಡಿ ವಲಯ ಮುಸ್ಲಿಮ್ ಜಮಾಅತ್ ಒಕ್ಕೂಟದ ಅಧ್ಯಕ್ಷರಾದ ಸಾಹುಲ್ ಹಮೀದ್ ಕದಿಕೆ ಹಾಗೂ ಅತಿಥಿಗಳು ಅಬ್ದುಲ್ ರಝಾಕ್ ಮೂಡುತೋಟ ಸಾಗ್ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿ ಗೌರವಿಸಿದರು.
ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಹಳೆಯಂಗಡಿ ವಲಯ ಮುಸ್ಲಿಮ್ ಜಮಾಅತ್ ಒಕ್ಕೂಟದ ಅಧ್ಯಕ್ಷರಾದ ಶಾಹುಲ್ ಹಮೀದ್ ಕದಿಕೆ ಅವರು, ಅಬ್ದುಲ್ ರಝಾಕ್ ಮೂಡುತೋಟ ಸಾಗ್ ಅವರು, ಕಳೆದ 40 ವರ್ಷಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಮಾಡಿರುವ ಅನುಪಮ ಸೇವೆಯನ್ನು ಗುರುತಿಸಿ 2023ನೇ ಸಾಲಿನ "ವರ್ಷದ ಹಿರಿಯ ವ್ಯಕ್ತಿ" ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಬ್ದುಲ್ ರಝಾಕ್ ಅವರು 71ರ ಹರೆಯದಲ್ಲೂ ಯುವಕರಂತೆ ಲವಲವಿಕೆಯಿಂದ ಸಮುದಾಯದ, ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ. ಅವರ ಮುಂದಿನ ಜೀವನ ಉಜ್ವಲವಾಗಿರಲೆಂದು ಹಾರೈಸಿದರು.
2023ನೇ ಸಾಲಿನ "ವರ್ಷದ ಹಿರಿಯ ವ್ಯಕ್ತಿ" ಆಯ್ಕೆ ಪ್ರಕ್ರಿಯೆಯಲ್ಲಿ ಮುಸ್ಲಿಮ್ ಜಮಾಅತ್ ಒಕ್ಕೂಟದ ಪದಾಧಿಕಾರಿಗಳಾದ ಉಪಾಧ್ಯಕ್ಷ ಹಾರಿಸ್ ನವರಂಗ್, ಪ್ರಧಾನ ಕಾರ್ಯದರ್ಶಿ ಮೊಯ್ದೀನ್ ಇಂದಿರನಗರ, ಸಹ ಕಾರ್ಯದರ್ಶಿ ಅಬ್ದುಲ್ ಅಝೀಝ್ ಐ.ಎ.ಕೆ., ಕೋಶಾಧಿಕಾರಿ ಮಿರ್ಝಾ ಅಹ್ಮದ್ ಸಂತೆಕಟ್ಟೆ, ಗೌರವ ಸಲಹೆಗಾರರಾದ ಅಬ್ದುಲ್ ಖಾದರ್ ಕಜಕತೋಟ, ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಕುಡುಂಬೂರು, ಜೊತೆ ಕಾರ್ಯದರ್ಶಿ ಅಬ್ದುಲ್ ಅಝೀಝ್ ಐಎಕೆ, ಎಂ.ಎ. ಅಬ್ದುಲ್ ಖಾದರ್ ಇಂದಿರಾನಗರ, ಅಕ್ಬರ್ ಕಲ್ಲಾಪು, ಅಬ್ದುಲ್ ಖಾದರ್ ಸಾಗ್, ಹಬೀಬ್ ಕದಿಕೆ, ಅಸೀರ್ ಕದಿಕೆ, ವಾಸಿಂ ತೋಕೂರು, ಇಲ್ಯಾಸ್ ಕಜಕತೋಟ, ರಿಯಾಝ್ ಕಲ್ಲಾಪು ಮೊದಲಾದವರು ಸಹಕರಿಸಿದ್ದರು ಎಂದು ಶಾಹುಲ್ ಹಮೀದ್ ಮಾಹಿತಿ ನೀಡಿದರು.
ಪ್ರಸ್ತುತ ಹಿಮಾಯತುಲ್ ಇಸ್ಲಾಂ ಜುಮಾ ಮಸೀದಿ ಸಂತೆಕಟ್ಟೆ, ಬದ್ರಿಯಾ ಜುಮಾ ಮಸೀದಿ ಸಾಗ್, ಎಸ್ಕೆಎಸ್ಸೆಸ್ಸೆಫ್ ಹಳೆಯಂಗಡಿ, ಎಸ್ಕೆಎಸ್ಬಿವಿ, ಹಳೆಯಂಗಡಿ ವಲಯ ಮುಸ್ಲಿಮ್ ಜಮಾತ್ ಒಕ್ಕೂಟ, ಸುರತ್ಕಲ್ ರೇಂಜ್ ಜಂ ಇಯ್ಯತುಲ್ ಮುಲ್ಲಿಮೀನ್, ಮದ್ರಸ ಮ್ಯಾನೇಜ್ಮೆಂಟ್, ಹಝ್ರತ್ ಸೈಯ್ಯದ್ ಮೌಲಾನ ದರ್ಗಾ ಶರೀಫ್ ಉರೂಸ್ ಸಮಿತಿ ಸೇರಿದಂತೆ ವಿವಿಧ ಜುಮಾ ಮಸೀದಿಗಳಲ್ಲಿ, ಧಾರ್ಮಿಕ ಸಂಘಟನೆಗಳಲ್ಲಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿ ಯಾಗಿ, ಸದಸ್ಯರಾಗಿ ಪ್ರಶಸ್ತಿ ಪುರಸ್ಕೃತರಾದ ಅಬ್ದುಲ್ ರಝಾಕ್ ಮೂತೋಟ ಸಾಗ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶೈಖುನಾ ಬೊಳ್ಳೂರು ಉಸ್ತಾದ್, ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಅಬ್ದುಲ್ಲಾ ಝೈನಿ ಬಡಗನ್ನೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಹಾಜಿ ಕುಡುಂಬೂರು, ಕಾರ್ಯದರ್ಶಿ ಎಚ್.ಕೆ. ಮುಹಮ್ಮದ್ ಹಾಜಿ, ಹಝ್ರತ್ ಸೈಯ್ಯದ್ ಮೌಲಾನ ವಲಿಯುಲ್ಲಾ ದರ್ಗಾ ಶರೀಫ್ ಉರೂಸ್ ಸಮಿತಿಯ ಅಧ್ಯಕ್ಷ ಜಮಾಲುದ್ದೀನ್, ಶಿಹಾಬುದ್ದಿನ್ ಚೊಕ್ಕಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.







