ರಾಷ್ಟ್ರಮಟ್ಟದ ಕರಾಟೆ: ಕ್ರೆಸೆಂಟ್ ಕಾಪುವಿಗೆ ಹಲವು ಪ್ರಶಸ್ತಿ

ಕಾಪು : ಇತ್ತೀಚೆಗೆ ಹಿರಿಯಡ್ಕ ಶ್ರೀ ವೀರಭದ್ರ ಸಭಾಂಗಣದಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಾಪು ಚಂದ್ರನಗರದ ಕ್ರೆಸೆಂಟ್ ಇಂಟರ್ ನ್ಯಾಷನಲ್ ಸಂಸ್ಥೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಪಡೆಯುವ ಮೂಲಕ ಗಮನಸೆಳೆದರು
ಬಹುಮಾನ ಪಡೆದ ವಿದ್ಯಾರ್ಥಿಗಳು: ಝಯಾನ, ಮೊಹಮ್ಮದ್ ಅದ್ನಾನ್ ಚಿನ್ನದ ಪದಕ, ಮೊಹಮ್ಮದ್ ಶಮೀಲ್, ಮೊಹಮ್ಮದ್ ಶುಹೆಮ್ ಶಂಶುದ್ದೀನ್, ಶೇಝ ಶೇಖ್, ಮೊಹಮ್ಮದ್ ಸೈದ್, ಬೆಳ್ಳಿಯ ಪದಕ, ಅಲೀನಾ, ಅಲೀಷ, ಮೊಹಮ್ಮದ್ ಝೈಮ್, ಮೊಹಮ್ಮದ್ ಹುಜೈಫ್, ಮೊಹಮ್ಮದ್ ಸೈದ್, ಮೊಹಮ್ಮದ್ ಝೈದ್, ಮೊಹಮ್ಮದ್ ತಫಾಝಲ್ ಕಂಚಿನ ಪದಕ ಪಡೆದಿರುತ್ತಾರೆ.
ಸಂಸ್ಥೆಯ ಅಧ್ಯಕ್ಷ ಶಂಶುದ್ದೀನ್ ಯೂಸಫ್, ಆಡಳಿತಾಧಿಕಾರಿ ನವಾಬ್ ಹಸನ್ ಗುತ್ತೇದಾರ್, ಕರಾಟೆ ಶಿಕ್ಷಕ ಶಂಶುದ್ದೀನ್ ಹಾಗೂ ಪ್ರಾಂಶುಪಾಲ ಅಕ್ಬರ್ ಅಲಿ ಉಪಸ್ಥಿತರಿದ್ದರು.
Next Story





