ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

ಮಂಗಳೂರು, ಜ.10: ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘಟನೆಯಾದ ಬಿಕರ್ನಕಟ್ಟೆಯ ಉತ್ಸಾಹಿ ಯುವಕ ವೃಂದದ 36ನೇ ವರ್ಷದ ಸವಿನೆನಪಿಗಾಗಿ ಸರಳ ವಿವಾಹ ಕಾರ್ಯಕ್ರಮವು ಮಾರ್ಚ್ 24ರಂದು ಬಿಕರ್ನಕಟ್ಟೆ ಶ್ರೀ ಕ್ಷೇತ್ರ ಬಲಮುರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ.
ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ವಧು-ವರರು ತಮ್ಮ ವಯಸ್ಸಿನ ದಾಖಲೆ, ವಾಸಸ್ಥಳ ಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ 2024ರ ಮಾ.1ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಸರಳ ವಿವಾಹದಲ್ಲಿ ಭಾಗವಹಿಸುವ ವಧುವಿಗೆ 1 ಪವನ್ ಚಿನ್ನದ ತಾಳಿಯೊಂದಿಗೆ ಕರಿಮಣಿ ಸರ, ಸೀರೆ, ರವಿಕೆ ಕಣ ಹಾಗೂ ವರನಿಗೆ ಶಾಲು ಧೋತಿ, ಉಡುಗೊರೆ ನೀಡಲಾಗುವುದು ಹಾಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗುವುದು. ಹೆಸರು ನೋಂದಾಯಿ ಸಲು ಮೊ.ಸಂ: 9663261575. 9008964144/ 9945879887ನ್ನು ಸಂಪರ್ಕಿಸಬಹುದು ಎಂದು ಉತ್ಸಾಹಿ ಯುವಕ ವೃಂದದ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





