ಕಾಟಿಪಳ್ಳ ನೂರುಲ್ ಹುದಾ ಶಾಲಾ ವಾರ್ಷಿಕೋತ್ಸವ

ಸುರತ್ಕಲ್, ಜ.11: ಕಾಟಿಪಳ್ಳದ ನೂರುಲ್ ಹುದಾ ಆಂಗ್ಲ ಮಾಧ್ಯಮ ಶಾಲೆಯ 34ನೇ ವಾರ್ಷಿಕೋತ್ಸವವು ಶಾಲಾ ವಠಾರದಲ್ಲಿ ಜರುಗಿತು.
ಪೂರ್ವಾಹ್ನ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಕಾರ್ಪೊರೇಟರ್ ಪಿ.ಬಶೀರ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೆಎಂವೈಎ ದಮ್ಮಾಮ್ ಮತ್ತು ರಿಯಾದ್ ಇದರ ಪ್ರತಿನಿಧಿಗಳಾದ ಶಕೀಲ್ ಅದಂ ಹಾಗೂ ಹುಸೈನ್ ಶಾಫಿ ಮುಹಮ್ಮದ್ ಮತ್ತು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ. ಕೆ. ಮುಹಮ್ಮದ್ ಬಾವ ಭಾಗವಹಿಸಿದ್ದರು.
ಅಪರಾಹ್ನ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬದ್ರುದ್ದೀನ್ ಪಣಂಬೂರ್ ವಹಿಸಿದ್ದರು.
ಪಣಂಬೂರು ಮುಸ್ಲಿಂ ಜಮಾಅತ್-ಕಾಟಿಪಳ್ಳ ಇದರ ಅಧ್ಯಕ್ಷ ಎಸ್. ರಹ್ಮತುಲ್ಲಾ, ಶಾಲೆಯ ಹಳೆಯ ವಿದ್ಯಾರ್ಥಿ, ಉದ್ಯಮಿ ಮುಹಮ್ಮದ್ ಹಫೀಫ್, ಜ್ಯೊತಿ ಕಾಮತ್ ಹಾಗೂ ಹಸನಬ್ಬ ಮಾಸ್ಟರ್ ಪಿಯು ಕಾಲೇಜಿನ ಪ್ರಾಂಶುಪಾಲೆ ರೇಖಾ.ಬಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಾಲೆಯಲ್ಲಿ 24 ವರ್ಷ ಕರ್ತವ್ಯ ನಿರ್ವಹಿಸಿದ್ದ ಮುಖ್ಯ ಶಿಕ್ಷಕಿ ಸುನೀತಾ ಪೈ ವರನ್ನು ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಾದ ಆಯಿಶಾ ತೌಫೀರಾ ಮತ್ತು ಝೈನಬಾ ಶಜ್ಮ ಅವರನ್ನು ಸನ್ಮಾನಿಸಲಾಯಿತು.
ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಆರಿಫಾ ಮುಸ್ತಫಾ, ಕಾರ್ಯದರ್ಶಿ ಜಿ. ಮುಹಮ್ಮದ್, ಕೋಶಾಧಿಕಾರಿ ಪಿ.ಎ.ಮುಹಮ್ಮದ್ ಶರೀಫ್, ಸಹ ಟ್ರಸ್ಟಿಗಳಾದ ಪಿ.ಅಬ್ದುಲ್ ಹಮೀದ್, ಎಂ. ಅಬ್ದುಲ್ ಖಯ್ಯೂಮ್, ಶಾಲಾ ವಿದ್ಯಾರ್ಥಿ ನಾಯಕ ಮೊಯಿನು ದ್ದೀನ್ ಶಯಾನ್ ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗುಲ್ನಾಝ್ ಖಾನ್ ವರದಿ ವಾಚಿಸಿದರು. ಸಂಚಾಲಕ ಪಿ.ಎ.ಇಲ್ಯಾಸ್ ಸ್ವಾಗತಿಸಿದರು. ಸಹ ಶಿಕ್ಷಕಿ ಜೆಸಿಂತಾ ವಾಲ್ಟರ್ ವಂದಿಸಿದರು. ಜೆಸೀರಾ ಮತ್ತು ನಿಲೋಫರ್ ಕಾರ್ಯಕ್ರಮ ನಿರೂಪಿಸಿದರು.
ಹುತಾತ್ಮ ಕ್ಯಾ.ಯಂ.ವಿ.ಪ್ರಾಂಜಲ್ ಸ್ಮರಣಾರ್ಥ ವಿಶೇಷ ಪ್ರಹಸನ ಹಾಗೂ ಸೋಷಿಯಲ್ ಮೀಡಿಯಾದ ಅತಿಯಾದ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದೊಂದಿಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿನಿ ಯರಾದ ಆಫಿಯಾ ಮತ್ತು ಅಲೀನಾ ನಿರೂಪಿಸಿದರು.







