ಮಿಸ್ಟರ್ ಮದಿಮಯೆ ಕರಾವಳಿಯಾದ್ಯಂತ ತೆರೆಗೆ
ಮಂಗಳೂರು: ಎಂಎಂಎಂ ಗ್ರೂಪ್ಸ್ ಬ್ಯಾನರ್‌ನಡಿ ನಿರ್ಮಾಣವಾದ ‘ಮಿಸ್ಟರ್ ಮದಿಮಯೆ’ ತುಳು ಸಿನಿಮಾ ನಗರದ ಭಾರತ್ ಸಿನಿಮಾಸ್‌ನಲ್ಲಿ ಶುಕ್ರವಾರ ಬಿಡುಗಡೆಯಾಯಿತು.
ಈ ಸಂದರ್ಭ ಮಾತಾಡಿದ ಆರ್.ಕೆ. ನಾಯರ್ ದೇಶ ವಿದೇಶಗಳಲ್ಲಿ ಇತ್ತೀಚೆಗೆ ತುಳು ಸಿನಿಮಾ ಬಿಡುಗಡೆಯಾಗುತ್ತಿದೆ. ತುಳುವರು ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದ್ದಾರೆ. ತುಳು ಭಾಷೆ ಬೆಳವಣಿಗೆಗೆ ಇದರಿಂದ ಸಹಾಯವಾಗುತ್ತದೆ ಎಂದರು.
ಚಿತ್ರ ನಿರ್ಮಾಪಕ ಟಿ.ಎ. ಶ್ರೀನಿವಾಸ್, ಹಾಸ್ಯನಟ ಭೋಜರಾಜ್ ವಾಮಂಜೂರ್ ಮಾತನಾಡಿದರು.
ವೇದಿಕೆಯಲ್ಲಿ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ಪ್ರಕಾಶ್ ಪಾಂಡೇಶ್ವರ್, ಇಸ್ಮಾಯಿಲ್ ಮೂಡುಶೆಡ್ಡೆ, ಮುಹಮ್ಮದ್ ಆತಿಫ್, ತಸ್ಲೀಮ್, ತಮ್ಮ ಲಕ್ಷ್ಮಣ, ರಾಜೇಶ್ ಗುರೂಜಿ, ರಾಹುಲ್ ಅಮೀನ್, ನಾಯಕ ನಟ ಸಾಯಿಕೃಷ್ಣ ಕುಡ್ಲ, ನಾಯಕಿ ಶ್ವೇತಾ ಸುವರ್ಣ, ಜ್ಯೋತಿಷ್ ಶೆಟ್ಟಿ, ನಿರ್ಮಾಪಕ ಮಿಥುನ್ ಕೆಎಸ್, ಚೇತನ್, ರಾಜೇಶ್ ಫೆರಾವೋ, ನಿರ್ದೇಶಕ ನವೀನ್ ಕೆ. ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.





