ಮಂಗಳೂರು: ಚಿನ್ನಾಭರಣ ಕಳವು

ಸಾಂದರ್ಭಿಕ ಚಿತ್ರ
ಮಂಗಳೂರು, ಜ.12: ನಗರ ಹೊರವಲಯದ ಕುಲಶೇಖರ ಕೆಎಂಎಫ್ ಡೈರಿ ಸಮೀಪದ ನಂದಿನಿ ನಗರದಲ್ಲಿ ಗುರುವಾರ ಹಾಡುಹಗಲೇ ಮನೆಯಿಂದ ಚಿನ್ನಾಭರಣ ಕಳವು ಮಾಡಿರುವ ಘಟನೆ ವರದಿಯಾಗಿದೆ.
ಅರುಣ್ ಎಚ್.ಎಸ್ ಜ.11ರಂದು ಬೆಳಗ್ಗೆ 10:30ಕ್ಕೆ ತನ್ನ ಪತ್ನಿಯನ್ನು ಫರಂಗಿಪೇಟೆಗೆ ಕರೆದೊಯ್ದು ಅಪರಾಹ್ನ 3ಕ್ಕೆ ಮನೆಗೆ ವಾಪಸ್ ಬಂದಾಗ ಕಳ್ಳರು ಮನೆಯ ಹೆಂಚುಗಳನ್ನು ತೆಗೆದು ಒಳಪ್ರವೇಶಿಸಿರುವುದು ಕಂಡುಬಂದಿದೆ. ಪರಿಶೀಲಿಸಿದಾಗ ಮನೆಯ ಬೆಡ್ರೂಮ್ನ ಸೆಲ್ಫ್ನಲ್ಲಿದ್ದ ಕಪಾಟಿನ ಕೀಯನ್ನು ಬಳಸಿ ನೆಕ್ಲೇಸ್, ಕಿವಿಯೋಲೆ, ಮಗುವಿನ ಸರ, ಬ್ರಾಸ್ಲೆಟ್, ಕೈಬಳೆ, ರಿಂಗ್ಗಳು ಸಹಿತ ಅಂದಾಜು 3.50 ಲ.ರೂ. ಮೌಲ್ಯದ ಸುಮಾರು 87.05 ಗ್ರಾಂ ಚಿನ್ನಾಭರಣ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





