ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘ: ಅಧ್ಯಕ್ಷರಾಗಿ ಮಹಮ್ಮದ್ ಆಲಿ ಪುನರಾಯ್ಕೆ

ಪುತ್ತೂರು: ತಾಲೂಕಿನ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ ಮೂರನೇ ಬಾರಿಗೆ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಸುರೇಂದ್ರ ರೈ ಬಳ್ಳಮಜಲು ಅವರು ಆಯ್ಕೆಗೊಂಡರು. ಇಬ್ಬರ ಆಯ್ಕೆಯು ಅವಿರೋಧವಾಗಿ ನಡೆಯಿತು.
ಸಹಕಾರ ಸಂಘದ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಸಹಕಾರಿ ಇಲಾಖೆಯ ಅಧೀಕ್ಷಕ ನಾಗೇಂದ್ರ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಸಂಘದ ನಿರ್ದೇಶಕರಾದ ಸಂಶುದ್ಧೀನ್, ರಂಜಿತ್ ಬಂಗೇರಾ. ಗಣೇಶ್ ರೈ, ಸದಾನಂದ ಶೆಟ್ಟಿ ಕೂರೇಲು, ಚಂದ್ರಕಲಾ ಪಿ, ತೆರೆಜಾ ಎಂ ಸಿಕ್ವೇರಾ, ಇಸ್ಮಾಯಿಲ್ ಎಂ, ಗಣೇಶ್ ರೈ, ಶೀನಪ್ಪ ಮತ್ತು ತಿಮ್ಮಪ್ಪ ನಾಯ್ಕ ಉಪಸ್ಥಿತರಿದ್ದರು.
Next Story





