ಹಳೆಯಂಗಡಿ ಬೊಳ್ಳೂರು ರಿಲಯನ್ಸ್ ಅಸೋಸಿಯೇಶನ್ ವತಿಯಿಂದ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ

ಹಳೆಯಂಗಡಿ: ರಿಲಯನ್ಸ್ ಅಸೋಸಿಯೇಶನ್ ಬೊಳ್ಳೂರು ಹಳೆಯಂಗಡಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸರಳ ಸಾಮೂಹಿಕ ವಿವಾಹಕ್ಕೆ ಅರ್ಹ ವಧು-ವರರಿಂದ ಅರ್ಜಿ ಅಹ್ವಾನಿಸಲಾಗಿದೆ.
ಸಾಮೂಹಿಕ ವಿವಾಹ ಕಾರ್ಯಕ್ರಮವು ಇಂದಿರಾನಗರದ ರಿಲಯನ್ಸ್ ಭವನದಲ್ಲಿ ಮೇ 26ರಂದು ನಡೆಯಲಿದೆ. ಆಸಕ್ತ ವಧು-ವರರು ಅರ್ಜಿಯನ್ನು ರಿಲಯನ್ಸ್ ಭವನ, ಇಂದಿರಾನಗರ, ಹಳೆಯಂಗಡಿ ಇಲ್ಲಿಗೆ ಮಾರ್ಚ್ 31ರೊಳಗಾಗಿ ತಲುಪಿಸಬೇಕು.
ವಧುವಿಗೆ 18 ವರ್ಷ ಮತ್ತು ವರನಿಗೆ 21 ವರ್ಷ ಪೂರ್ಣಗೊಂಡಿರಬೇಕು. ಅರ್ಜಿ ನಮೂನೆಯಲ್ಲಿ ವರ ಮತ್ತು ವಧುವಿನ ಭಾವಚಿತ್ರಗಳನ್ನು ಲಗತ್ತಿಸಿರಬೇಕು. ವಧು, ವರರ ವಯಸ್ಸಿನ ಬಗ್ಗೆ ಶಾಲಾ ಪ್ರಮಾಣ ಪತ್ರ ಅಥವಾ ಜನ್ಮ ದಿನಾಂಕ ಹೊಂದಿರುವ ಇತರ ದಾಖಲೆಗಳನ್ನು ಲಗತ್ತಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ 7411188899, 9731643471 ಸಂಪರ್ಕಿಸಬಹುದು ಎಂದು ರಿಲಯನ್ಸ್ ಅಸೋಸಿಯೇಶನ್ ಬೊಳ್ಳೂರು ಇದರ ಅಧ್ಯಕ್ಷರಾದ ಕಲಂದರ್ ಕೌಶಿಕ್ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮುಬಾರಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





