ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದಿಂದ ‘ಅಮೃತ ನಮನ’ ಕಾರ್ಯಕ್ರಮ

ಮಂಗಳೂರು: ‘ಬದುಕಿನುದ್ದಕ್ಕೂ ಪ್ರೀತಿಯನ್ನೇ ಹಂಚಿ ಸರ್ವ ಸಮಾಜದ ಒಲುಮೆ ಗಳಿಸಿದ ಅಮೃತ ಸೋಮೇಶ್ವರ ಶ್ರೇಷ್ಠ ಮಾನವತಾವಾದಿಯಾಗಿದ್ದರು. ಕನ್ನಡ, ತುಳು, ಮಲೆಯಾಳ ಭಾಷೆಗಳ ಅಂತಸ್ಸತ್ವವನ್ನು ಅರಿತು ಸಾಹಿತ್ಯದ ಎಲ್ಲಾ ವಿಭಾಗಗಳಲ್ಲೂ ಕೈಯಾಡಿಸಿದ ಅವರು ಸಾರಸ್ವತ ಲೋಕದ ಹಿರಿಯಣ್ಣನಂತೆ ಬದುಕಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಇತ್ತೀಚೆಗೆ ನಿಧನರಾದ ಡಾ.ಅಮೃತ ಸೋಮೇಶ್ವರ ಅವರ ಸ್ಮರಣಾರ್ಥ ಕುತ್ತಾರಿನಲ್ಲಿ ಏರ್ಪಡಿಸಿದ್ದ ‘ಅಮೃತ ನಮನ’ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿ ಮಾತನಾಡಿದರು.
ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಕಳ್ಳಿಮಾರು, ಸಮಿತಿಯ ಪದಾಧಿಕಾರಿಗಳಾದ ಕೆ. ಲಕ್ಷ್ಮಿನಾರಾಯಣ ರೈ ಹರೇಕಳ, ದೀಪಕ್ ರಾಜ್ ಉಳ್ಳಾಲ್, ಹರೀಶ್ ಮಾಸ್ಟರ್, ಸುವಾಸಿನಿ ಬಬ್ಬುಕಟ್ಟೆ, ವಿನುತಾ ಉಪಸ್ಥಿತರಿದ್ದರು.
ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಸ್ವಾಗತಿಸಿದರು. ಕಾರ್ಯದರ್ಶಿ ವಿಜಯಲಕ್ಷ್ಮಿಕಟೀಲ್ ವಂದಿಸಿದರು. ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.







