ಮಹಿಳೆ ನಾಪತ್ತೆ

ಮಂಗಳೂರು, ಜ.16: ಸುಮಾರು 12 ವರ್ಷಗಳಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದ ರಾಧಾ (53) ಎಂಬವರು ಜ.9ರಿಂದ ಕಾಣೆಯಾಗಿರುವುದಾಗಿ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5 ಅಡಿ ಎತ್ತರದ, ಗೋಧಿ ಮೈಬಣ್ಣದ, ಸಾಧಾರಣ ಶರೀರದ ಈಕೆ ಕಾಣೆಯಾದ ದಿನ ಹಸಿರು ಮತ್ತು ಕೆಂಪು ಬಣ್ಣ ಮಿಶ್ರಿತ ನೈಲನ್ ಸೀರೆ ಧರಿಸಿದ್ದರು. ಇವರನ್ನು ಕಂಡವರು ದೂ.ಸಂ: 0824-2220530, 9480805331, 9538311411ನ್ನು ಸಂಪರ್ಕಿಸಬಹುದು ಎಂದು ಪಣಂಬೂರು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





