ಪಣಂಬೂರು: ಲಾರಿ ಢಿಕ್ಕಿ; ಕಾರ್ಮಿಕ ಮೃತ್ಯು

ಪಣಂಬೂರು, ಜ.16: ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಕಾರ್ಮಿಕನೋರ್ವ ಮೃತಪಟ್ಟ ಘಟನೆ ನವಮಂಗಳೂರು ಬಂದರ್ ನಲ್ಲಿ ವರದಿಯಾಗಿದೆ.
ಮೃತಪಟ್ಟವರನ್ನು ಸಿಗ್ನಲ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಶಿವಮೂರ್ತಿ ಎಂದು ತಿಳಿದು ಬಂದಿದೆ.
ಚಾಲಕ ರಾಜಾ ಎಂಬಾತ ತನ್ನ ಟಿಪ್ಪರ್ ನಲ್ಲಿದ್ದ ಮೈನ್ಸ್ ನ್ನು ಭರ್ತ್ ಸಂಖ್ಯೆ 2ರಲ್ಲಿ ಅನ್ ಲೋಡ್ ಮಾಡಲು ಲಾರಿಯನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ಎನ್ನಲಾಗಿದೆ. ಈ ವೇಳೆ ಶಿವಮೂರ್ತಿಯವರು ಲಾರಿಯ ಹಿಂಭಾಗದಲ್ಲಿ ನಿಂತು ಭರ್ತ್ ಗೆ ಸಿಗ್ನಲ್ ನೀಡುತ್ತಿದ್ದರು. ಈ ವೇಳೆ ಲಾರಿ ಶಿವಮೂರ್ತಿ ಅವರ ಮೇಲೆ ಹರಿದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾರಿ ಚಾಲಕ ರಾಜ ನನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Next Story





