ಯೆನೆಪೋಯ ವಿವಿ : ಸ್ವಯಂ ಉದ್ಯೋಗ ತರಬೇತಿ ಕಾರ್ಯಾಗಾರ

ಮಂಗಳೂರು: ಯೆನೆಪೊಯ ವಿಶ್ವವಿದ್ಯಾನಿಲಯವು ದತ್ತೋಪಂತ್ ಥೇಂಗಡಿ ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿ, ಭಾರತ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಸಹಯೋಗದೊಂದಿಗೆ ವಿಶ್ವವಿದ್ಯಾನಿಲಯದ ಸಿಬ್ಬಂದಿಗೆ ಸ್ವಯಂ ಉದ್ಯೋಗದ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಗುರುವಾರ ಯೆನೆಪೊಯ ವಿವಿಯಲ್ಲಿ ನಡೆಯಿತು.
ಮಂಗಳೂರು ಪ್ರಾದೇಶಿಕ ನಿರ್ದೇಶನಾಲಯದ ಶಿಕ್ಷಣಾಧಿಕಾರಿ ಸುಮೇಶ್ ಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜೆಸಿಐ ಇಂಡಿಯಾದ ವಲಯ ತರಬೇತುದಾರ ಪೀಟರ್ ಅಂತೋನಿ ಪಿಂಟೋ ಹರಿನಾ ಜೆ ರಾವ್ ಮತ್ತು ರೇಖಲತಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಿದರು. ಕ್ಯಾಂಡಲ್ ತಯಾರಿಕೆ, ಲಿಕ್ವಿಡ್ ಸೋಪ್ ಮತ್ತು ಫಿನೈಲ್ ತಯಾರಿಕೆ ಬಗ್ಗೆ ತರಬೇತಿ ನೀಡಲಾಯಿತು. ವಿಶ್ವವಿದ್ಯಾನಿಲಯದ ಪರಿಸರ ಅಧ್ಯಯನ ಕೇಂದ್ರವು ಇದೇ ಸಂದರ್ಭದಲ್ಲಿ ಎರೆಗೊಬ್ಬರ ಕುರಿತು ತರಬೇತಿಯನ್ನು ಆಯೋಜಿಸಿತ್ತು.
ವಿನಾಯಕ ಭಟ್ ಮತ್ತು ಉಪನಿರ್ದೇಶಕಿ ಡಾ. ಭಾಗ್ಯ ಬಿ.ಶರ್ಮಾ ಕಾರ್ಯಕ್ರಮ ನಿರೂಪಿಸಿದರು.
Next Story





