ಯುವತಿ ನಾಪತ್ತೆ

ಮಂಗಳೂರು , ಜ.18: ಮನೆಯಿಂದ ಕೆಲಸಕ್ಕೆಂದು ಹೋಗಿದ್ದ ಯುವತಿಯೊಬ್ಬಳು ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿ ರುವ ಘಟನೆ ನಗರದ ಕೊಡಿಕ್ಕಲ್ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.
ಕುಶಾಲಾಕ್ಷಿ ರವರ ಮಗಳು ಪವಿತ್ರ (24 ) ಎಂಬವರು ಜ. 16ರಂದು ಬೆಳಗ್ಗೆ ಸುಮಾರು 9:30 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಹೋದವರು ಈವರೆಗೆ ಮನೆಗೆ ವಾಪಾಸ್ ಬಾರದೇ ಕಾಣೆಯಾಗಿರುವುದಾಗಿ ಉರ್ವಾ ಪೊಲೀಸರಿಗೆ ದೂರು ನೀಡಲಾಗಿದೆ.
Next Story





