ಗುಜ್ಜರಕೆರೆಗೆ ಮೇಯರ್ ಭೇಟಿ: ಮನವಿ ಸಲ್ಲಿಕೆ

ಮಂಗಳೂರು: ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಶನಿವಾರ ಗುಜ್ಜರೆಕೆಗೆ ಭೇಟಿ ನೀಡಿದ್ದು, ಈ ಸಂದರ್ಭ ಸ್ಥಳೀ ಯರು ನೀರಿನ ಶುದ್ಧತೆಗೆ ಕ್ರಮ ಹಾಗೂ ಸ್ಥಳೀಯ ದೇಗುಲಗಳ ದೇವರ ಅವಭೃತ ಸ್ನಾನಕ್ಕಾಗಿ ಕೆರೆಯ ಮಧ್ಯ ತೀರ್ಥ ಕೆರೆ ನಿರ್ಮಾಣಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಗುಜ್ಜರಕೆರೆಯು ನಾಥ ಪಂಥದ ಯೋಗಿ ಗೋರಕ್ಷನಾಥರಿಂದ ನಿರ್ಮಾಣವಾಗಿದ್ದು, ಜಿಲ್ಲೆಯ ಅತೀ ಪುರಾತನ ದೇಗುಲದ ತೀರ್ಥ ಕೆರೆಯೂ ಆಗಿದೆ. ಸ್ಥಳೀಯ ಪರಿಸರಕ್ಕೆ ಜಲಮೂಲವಾಗಿದ್ದ ಧಾರ್ಮಿಕ ಹಾಗೂ ಐತಿಹಾಸಿಕ ಕೆರೆಯು ನಾಮಾವೇ ಶಷದ ಸ್ಥಿತಿ ತಲುಪಿದ್ದಾಗ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯು ಸ್ಥಳೀಯ ಸಹಕಾರದಿಂದ ಹೋರಾಟ ನಡೆಸಿದ ಪರಿಣಾಮ ಪ್ರಸ್ತುತ ಅಭಿವೃದ್ಧಿಯಾಗಿದೆ. ಸ್ಮಾರ್ಟ್ ಸಿಟಿಯಡಿ ಕೆರೆ ಪರಿಸರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆದು ಜನಾಕ ರ್ಷಣೆ ಪಡೆದಿದ್ದರೂ ಸ್ಥಳೀಯರ ಆಶಯಕ್ಕೆ ಪೂರಕವಾಗಿ ಕೆರೆಯ ಮೂಲ ಮಹತ್ವಕ್ಕೆ ಅನುಗುಣವಾಗಿ ಅಭಿವೃದ್ದಿಯಾಗಿಲ್ಲ. ಅಭಿವೃದ್ಧಿ ಬಳಿಕವೂ ಕೆರೆಯ ನೀರಿನಲ್ಲಿ ವಿಷಕಾರಿ ಅಂಶ ಇರುವ ಬಗ್ಗೆ ಪ್ರಯೋಗಾಲಯದ ವರದಿಯಿಂದ ಸಾಬೀತಾಗಿದೆ. ಕೆರೆಯ ಮಧ್ಯ ಭಾಗದಲ್ಲಿ ತೀರ್ಥ ಕೆರೆ ನಿರ್ಮಿಸಬೇಕೆಂದು ಮಾದರಿ ನಕ್ಷೆ ಸೇರಿ ಮಾಹಿತಿ ನೀಡಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ಪ್ರಸ್ತುತ ಕೆರೆ ಮೋಜು ಮಸ್ತಿಯ ತಾಣವಾಗಿ ಪರಿವರ್ತನೆಗೊಂಡಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಸ್ಥಳೀಯರು ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪಿ. ನೇಮು ಕೊಟ್ಟಾರಿ ನೇತೃತ್ವದಲ್ಲಿ ಮೇಯರ್‌ಗೆ ಮನವಿ ಸಲ್ಲಿಸಿದರು.
ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಉಪಾಧ್ಯಕ್ಷ ಸಿ. ಪಿ. ದಿನೇಶ, ಸ್ಥಳೀಯ ಕಾರ್ಪೊರೇಟರ್ ಭಾನುಮತಿ ಪಿ.ಎಸ್, ಸ್ಥಳೀಯರಾದ ಉಮಾಶಂಕರ, ಉದಯಶಂಕರ್, ಸುಜಾತಾ, ದಿನೇಶ್, ಜ್ಞಾನೇಶ್, ಪ್ರಸಾದ್, ಹಳೇಕೋಟೆ ಶ್ರೀಮಾರಿ ಯಮ್ಮ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿ.ಅಶೋಕ್ ಕುಮಾರ್ ಉಪಸ್ಥಿತರಿದ್ದರು.







