ಮಹಾಭಾರತ ಒಂದು ಜನ ಸಮೂಹದ ಜೊತೆ ಬೆಳೆದ ಬಂದ ಕೃತಿ: ಲಕ್ಷ್ಮೀಶ ತೋಳ್ಪಾಡಿ

ಮಂಗಳೂರು: ಮಹಾಭಾರತ ಒಂದು ಜನ ಸಮೂಹದ ಜೊತೆ ಬೆಳೆದು ಬಂದ ಕೃತಿ.ಆದುದರಿಂದ ಅದನ್ನು ಜನ ಸಮೂಹ ದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಸಾಹಿತಿ ಲಕ್ಷ್ಮೀ ಶ ತೋಳ್ಪಾಡಿ ತಿಳಿಸಿದ್ದಾರೆ.
ಅವರು ಇಂದು ನಗರದ ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಹಮ್ಮಿಕೊಂಡಿರುವ ಮಂಗಳೂರು ಲಿಟ್ ಫೆಸ್ಟ್‌ನ ಆರನೇ ಆವೃತ್ತಿಯ ಎರಡನೆ ದಿನ ಭಾರತ ಒಂದು ಮಥನ ಗೋಷ್ಠಿಯಲ್ಲಿ ವಿಷಯ ಮಂಡಿಸಿದರು.
ಭಾರತೀಯರ ಇತಿಹಾಸ ಇಲ್ಲಿನ ಜನರ ಜೀವನದ ಅಂಗವಾಗಿ ಬೆಳೆದು ಬಂದಿದೆ. ಪ್ರತಿಕ್ಷಣವೂ ಬದಲಾಗುತ್ತಿರುವ ವಿದ್ಯ ಮಾನ ಜೀವನ.ಅದನ್ನು ಗುರುತಿಸುವುದು ಇತಿಹಾಸ. ಈ ರೀತಿ ಗುರುತಿಸುವ ಪ್ರಜ್ಞೆ ಯಿಂದ ಮನುಷ್ಯನ ಜ್ಞಾನ ವಿಕಾಸ ವಾಗುತ್ತದೆ. ವ್ಯಾಸರು ಈ ರೀತಿಯ ಇತಿಹಾಸ ಪ್ರಜ್ಞೆ ಯಿಂದ ಮಹಾಭಾರತ ಕೃತಿ ಯನ್ನು ರಚಿಸಿದ್ದಾರೆ. ಒಂದು ಕೃತಿ ಯನ್ನು ನಾವು ಆಳವಾಗಿ ಅಧ್ಯಯನ ಮಾಡಿದಾಗ ನಾವು ಅದರ ಪಾತ್ರವಾಗುತ್ತೇವೆ. ಉದಾಹರಣೆಗೆ ಮಧ್ವಾಚಾರ್ಯರು ಮಹಾ ಭಾರತ ಕೃತಿ ಓದಿ ತಾನು ಅದರಲ್ಲಿ ಭೀಮನ ಪಾತ್ರವೆಂದು ಭಾವಿಸುತ್ತಾರೆ ಮತ್ತು ಮಹಾಭಾರತ ಒಂದು ಆಧ್ಯಾತ್ಮ ಕೃತಿ ಯೆಂದು ಭಾವಿಸುತ್ತಾರೆ. ಪಂಪ ತನ್ನ ಪಂಪ ಭಾರತದಲ್ಲಿ ತನಗೆ ಆಶ್ರಯ ನೀಡಿದ ಅರಿಕೇಸರಿಯನ್ನು ಅರ್ಜುನನಿಗೆ ಸಮೀಕರಿಸಿ ಕೃತಿ ರಚಿಸುತ್ತಾನೆ. ಈ ರೀತಿ ಮಹಾಭಾರತ ಜನ ಸಮುದಾಯದ ಕೃತಿ ಯಾಗಿ ಕಾಲಕಾಲಕ್ಕೆ ಬದಲಾವಣೆ ಯೊಂದಿಗೆ ಜನ ಸಮುದಾಯದ ಬದುಕಿನ ಭಾಗವಾಗಿ ಬೆಳೆದು ಬಂದಿದೆ ಎಂದು ತೋಳ್ಪಾಡಿ ವಿವರಿಸಿದರು.
ಡಾ.ಜಿ.ಬಿ.ಹರೀಶ್ ಕಾರ್ಯಕ್ರಮ ನಿರೂಪಿಸಿದರು.





