ಹೂಡಿಕೆ ನೆಪದಲ್ಲಿ ವಂಚನೆ ಆರೋಪ: ಪ್ರಕರಣ ದಾಖಲು

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಷೇರು ಮಾರುಕಟ್ಟೆ ಹೂಡಿಕೆಯ ನೆಪದಲ್ಲಿ 10 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಆರೋಪದ ಮೇರೆಗೆ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಸಲಹೆ ಒದಗಿಸುವ ವಾಟ್ಸ್‌ಆ್ಯಪ್ ಗ್ರೂಪಿನ ಜಾಹೀರಾತನ್ನು ಫೇಸ್‌ಬುಕ್‌ನಲ್ಲಿ ನೋಡಿದ ತಾನು ಆ ಗ್ರೂಪ್ ಸೇರಿದೆ. ಬಳಿಕ ಹೂಡಿಕೆಗೆ ಸಂಬಂಧಿಸಿದ ಸಂದೇಶಗಳನ್ನು ಗಮಿಸುತ್ತಿದ್ದೆ. 2023ರ ಡಿ.5ರಂದು ವಾಟ್ಸ್‌ಆ್ಯಪ್ ಗ್ರೂಪ್‌ನ ಅಡ್ಮಿನ್ ತಿಳಿಸಿದಂತೆ ಟ್ರೇಡಿಂಗ್ ಬಗ್ಗೆ ಆನ್‌ಲೈನ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದೆ. ಬಳಿಕ ಈ ಆ್ಯಪ್ ಮೂಲಕ ಹಣವನ್ನು ಹೂಡಿಕೆ ಮಾಡುವಂತೆ ತಿಳಿಸಿದ್ದು, ಅಡ್ಮಿನ್ ಕಳುಹಿಸಿಕೊಟ್ಟ ನಾನಾ ಬ್ಯಾಂಕ್ ಖಾತೆಗಳಿಗೆ ತಾನು ಹಂತ ಹಂತವಾಗಿ 10,32,000 ರೂ. ವರ್ಗಾಯಿಸಿದ್ದೆ. ಬಳಿಕ ತಾನು ಮೋಸ ಹೋಗಿರು ವುದು ಗಮನಕ್ಕೆ ಬಂದಿದೆ ಎಂದು ಸೈಬರ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story





