ಸುರತ್ಕಲ್: ಮುಚ್ಚಲ್ಪಟ್ಟ ಟೋಲ್ ಗೇಟ್ ಮಧ್ಯೆ ಇದ್ದ ಸಿಮೆಂಟ್ ದಂಡೆ ತೆರವು

ಸುರತ್ಕಲ್: ಇಲ್ಲಿನ ಎನ್ಐಟಿಕೆಯಲ್ಲಿ ಮುಚ್ಚಲ್ಪಟ್ಟಿರುವ ಟೋಲ್ ಗೇಟ್ ರಸ್ತೆ ಮಧ್ಯೆ ಅಪಘಾತಗಳಿಗೆ ಕಾರಣವಾಗಿದ್ದ ಸಿಮೆಂಟ್ ದಂಡೆಗಳನ್ನು ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು.
ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸುವಂತೆ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಟೋಲ್ ಗೇಟ್ ಹೋರಾಟ ಸಮಿತಿ ರಚಿಸಿಕೊಂಡು ಸಾರ್ವಜನಿಕರು ನಿರಂತರ ಆಹೋರಾತ್ರಿ ಧರಣಿ ನಡೆಸಿದ್ದರು. ಇದರ ಪರಿಣಾಮವಾಗಿ 2023ರ ಡಿಸೆಂಬರ್ 1ರಂದು ಟೋಲ್ ಗೇಟ್ ನಲ್ಲಿ ಟೋಲ್ ಶುಲ್ಕ ಸಂಗ್ರಹ ನಿಲ್ಲಿಸಲಾಗಿತ್ತು.
ಅಧಿಕೃತವಾಗಿ ಟೋಲ್ ಸಂಗ್ರಹ ನಿಂತು ವರ್ಷವಾದರೂ ಟೋಲ್ ಗೇಟ್ ನ ಅವಶೇಷಗಳನ್ನು ಹಾಗೇ ಬಿಡಲಾಗಿತ್ತು. ಇಲ್ಲಿ ಸರಿಯಾದ ಬೀದಿ ದೀಪದ ವ್ಯವಸ್ಥೆ ಮತ್ತು ರಿಫ್ಲಕ್ಟರ್ ಸ್ಟಿಕ್ಕರ್‌ಗಳನ್ನು ಹಾಕದ ಹಿನ್ನೆಲೆಯಲ್ಲಿ ವಾಹನ ಅಪಘಾತ ಹೆಚ್ಚಾಗು ತ್ತಿತ್ತು. ಇತ್ತೀಚೆಗೆ ಟೋಲ್ ಗೇಟ್ ಮೇಲ್ಚಾವಣಿಗಳನ್ನು ತೆರವುಗೊಳಸಲಾಗಿತ್ತು. ಮತ್ತು ರಸ್ತೆಯ ಮಧ್ಯೆ ನಿರ್ಮಿಸಲಾಗಿದ್ದ ಸಿಮೆಂಟ್ ನ ದಂಡೆಗಳನ್ನು ತೆರವು ಮಾಡದೆ ಬಿಡಲಾಗಿತ್ತು. ಇದರಿಂದಾಗಿ ಇಲ್ಲಿ ನಿತ್ಯ ಅಪಘಾತಗಳು ನಡೆಯಲು ಆರಂಭಿವಾಗಿತ್ತು.
ಅಪಘಾತಗಳನ್ನು ನಿಯಂತ್ರಿಸುವ ನಿಯಂತ್ರಿಸುವ ಸಲುವಾಗಿ ಟೋಲ್ ಗೇಟ್ ಹೋರಾಟ ಸಮಿತಿ ನಿರಂತರ ಪೊಲೀಸ್ ಇಲಾಖೆಯಗಮನಕ್ಕೆ ತಂದು ಪ್ರತಿಭಟನೆಯ ಎಚ್ರಿಕೆ ನೀಡಿದ ಬಳಿಕ ಇಂದು ಟೋಲ್ ಗೇಟ್‌ನ ಸಂಪೂರ್ಣ ಅವಶೇಷಗಳನ್ನು ತೆರವು ಮಾಡಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗಿದೆ.







