ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಕೊಯ್ಯೂರ್‌ಗೆ ಸನ್ಮಾನ

ಮಂಗಳೂರು: ಗಣಿತ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಗಣಿತ ಪಠ್ಯ ವನ್ನು ಸುಲಲಿತವಾಗಿ ಮಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಕೊಯ್ಯೂರ್ ಮುಖ್ಯ ಶಿಕ್ಷಕರಾಗಿ ಪದೋನ್ನತಿಗೊಂಡ ಹಿನ್ನೆಲೆಯಲ್ಲಿ ಉಳ್ಳಾಲದ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರ ಸಂಘದ ವತಿಯಿಂದ ಉಳ್ಳಾಲದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಕೆಎಂಕೆ ಮಂಜನಾಡಿ, ಉಪಾಧ್ಯಕ್ಷ ಅಬ್ದುಲ್ ರಹ್ಮಾನ್, ನಸೀಮಾ, ಪ್ರಧಾನ ಕಾರ್ಯದರ್ಶಿ ರಸೂಲ್ ಖಾನ್, ಕೋಶಾಧಿಕಾರಿ ಪವಿತ್ರ ರೈ, ಸಂಘಟನಾ ಕಾರ್ಯದರ್ಶಿ ಇಮ್ತಿಯಾಝ್, ರಮ್ಲತ್ ಉಪಸ್ಥಿತರಿದ್ದರು.
Next Story





