ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ‘ಕಲಾ ದಿನ’ ಕಾರ್ಯಕ್ರಮ

ಮಂಗಳೂರು: ಕಲಾವಿದನ ಕೈ ಚಳಕದಿಂದ ಮೂಡುವುದೇ ಕಲೆ. ಮನಸ್ಸು ಮತ್ತು ಭಾವನೆಗಳನ್ನು ಪರಿಣಾಮಕಾರಿಯಾಗಿ ಸಂಯೋಜಿಸಿದಾಗ ಅದ್ಭುತವಾದ ಪ್ರತಿಮೆ ಅನಾವರಣವಾಗುವುದು. ಅದು ವ್ಯಕ್ತಿಯು ವ್ಯಕ್ತಿತ್ವವನ್ನು ಸಾಕಾರಗೊಳಿಸುವುದು. ಪ್ರತಿಯೊಬ್ಬರಲ್ಲಿಯೂ ಸುಪ್ತವಾದ ಕಲೆ ಅಡಗಿದ್ದು, ಅದನ್ನು ಹೊರ ಜಗತ್ತಿಗೆ ತೋರ್ಪಡಿಸಬೇಕಾಗಿದೆ ಎಂದು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ವ.ಫಾ. ರಾಬರ್ಟ್ ಡಿಸೋಜ ಹೇಳಿದರು.
ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆದ ‘ಕಲಾ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾರ್ಯ ಕ್ರಮದಲ್ಲಿ ಉಪಪ್ರಾಂಶುಪಾಲೆ ಬೆಲಿಟಾ ಮಸ್ಕರೇನ್ಹಸ್ ಮತ್ತು ಅನಿತಾ ಥೋಮಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಸಾಂಪ್ರದಾಯಿಕ, ಆಧುನಿಕ, ಜಲವರ್ಣ, ತೈಲವರ್ಣ ಮತ್ತು ಅಥೆಲಿಕ್ ಪ್ರಕಾರದ ಕಲೆಗಳನ್ನು ಪ್ರದರ್ಶಿಸಿ ದರು. ವಿದ್ಯಾರ್ಥಿಗಳಾದ ದಿಯಾ ಗಾದೆಮಾತು, ಇಥೆಲ್ ವಿವಿನ್ ಎಸ್. ಕಲಾ ದಿನದ ಪ್ರಾಮುಖ್ಯತೆ ವಿವರಿಸಿದರು. ಪ್ರಾಪ್ತಿ ರಾತೀಸ್ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ, ಪ್ರಿಸಾ, ಚೈತಾಲಿ ಕಲಾ ಪ್ರತಿಭೆಯನ್ನು ಪ್ರಸ್ತುತ ಪಡಿಸಿದರು.
ಕಲಾ ಶಿಕ್ಷಕ ತ್ಯಾಗರಾಜ್ ಎಂ. ಕಾರ್ಯಕ್ರಮ ಸಂಯೋಜಿಸಿದ್ದರು. ರೇವತಿ, ನಿಶ್ಮಿತಾ ಜ್ಯುವೆಲ್ ಪಿಂಟೊ, ಪದ್ಮಶ್ರೀ ಭಟ್, ಸೀಮಾ ಮಾಡ್ತಾ ಸಹಕರಿಸಿದ್ದರು.







