ಕುಸಿದು ಬಿದ್ದು ಸಿವಿಲ್ ಇಂಜಿನಿಯರ್ ಮೃತ್ಯು

ಉಳ್ಳಾಲ: ಸೈಟ್ ವಿಸಿಟ್ ವೇಳೆ ನಿರ್ಮಾಣ ಹಂತದ ಕಟ್ಟಡದಲ್ಲಿ ಕುಸಿದು ಬಿದ್ದ ಸಿವಿಲ್ ಇಂಜಿನಿಯರ್ ಓರ್ವರು ಆಸ್ಪತ್ರೆ ಸಾಗಿಸುವ ದಾರಿಯಲ್ಲಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ.
ಪ್ರವೀಣ್ ಆಚಾರ್ಯ (51) ಮೃತ ಪಟ್ಟ ವ್ಯಕ್ತಿ. ಮೂಲತ: ಮಾಣಿ ,ಅನಂತಾಡಿ ನಿವಾಸಿಯಾಗಿದ್ದ ಪ್ರವೀಣ್ ಪಂಡಿತ್ ಹೌಸ್ ನ ಬಾಡಿಗೆ ಮನೆಯಲ್ಲಿ ಪತ್ನಿ ,ಇಬ್ಬರು ಹೆಣ್ಮಕ್ಕಳೊಂದಿಗೆ ನೆಲೆಸಿದ್ದರು.
ಪ್ರವೀಣ್ ತೊಕ್ಕೊಟ್ಟುವಿನಲ್ಲಿ ಸಿವಿಲ್ ಇಂಜಿನಿಯರ್ ಕೆಲಸ ನಿರ್ವಹಿಸಿಸುತ್ತಿದ್ದು ಭಟ್ನಗರದಲ್ಲಿ ಕಚೇರಿ ಹೊಂದಿದ್ದರು. ರವಿವಾರ ಬೆಳಿಗ್ಗೆ ಅವರು ಉಳ್ಳಾಲ ಒಂಭತ್ತುಕೆರೆಯ ನಿರ್ಮಾಣ ಹಂತದ ಕಟ್ಟಡಕ್ಕೆ ಸೈಟ್ ಪರಿಶೀಲನೆಗೆ ತೆರಳಿದ್ದ ವೇಳೆ ಮೂರನೆ ಅಂತಸ್ತು ಏರುವಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿ ತಾದರೂ ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





