ಇಝ್ಝತುನ್ನೂರ್ ಯತೀಂ ಖಾನ: ನೂತನ ಕಟ್ಟಡ ಉದ್ಘಾಟನೆ, ಯತೀಂ ಯುವತಿಯ ಮದುವೆ ಕಾರ್ಯಕ್ರಮ

ಬಂಟ್ವಾಳ: ಇಝ್ಝತುನ್ನೂರ್ ಯತೀಂ ಖಾನ ಇದರ ನೂತನ ಕಟ್ಟಡ ಉದ್ಘಾಟನೆ ಮತ್ತು ಯತೀಂ ಯುವತಿಯ ಮದುವೆ ಕಾರ್ಯಕ್ರಮ ಬಂಟ್ವಾಳದ ಲೋರೆಟ್ಟೋ ಪದವಿನಲ್ಲಿ ಬಶೀರ್ ಬಂಟ್ವಾಳರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಸ್ಥೆಯ ಸಂಸ್ಥಾಪಕರಾದ ಸೆಯ್ಯದ್ ಅಸ್ಗರ್ ಅಲಿ ತಂಙಳ್ ಪ್ರಾರ್ಥನೆ ನೆರವೇರಿಸಿದರು. ಕಲಂದರ್ ಸಅದಿ ಸ್ವಾಗತಿಸಿ, ಇರ್ಷಾದ್ ದಾರಿಮಿ ಮಿತ್ತಬೈಲ್ ಉದ್ಘಾಟನೆಗೈದರು. ರಾಮನಾಥ ರೈ, ಸಂಸ್ಥೆಯ ಅಧ್ಯಕ್ಷರು ಅಬ್ದುಲ್ ಹಮೀದ್ ಮಂಡಾಡಿ, ಅಲ್ತಾಫ್ ಫರಂಗಿಪೇಟೆ, ಫಾಝಿಲ್ ರಝ್ವಿ ಕಾವಳ್ ಕಟ್ಟೆ, ಅನ್ಸಾರ್ ಫೈಝಿ, ರಫೀಕ್ ಮಾಸ್ಟರ್, ಅಬ್ದುಲ್ ಗಫೂರ್ ಹನೀಫಿ, ಆಹ್ಮದ್ ಶಾಫಿ, ರಿಯಾಝ್ ಫೈಝಿ, ಪಿಯುಸ್ ಎಲ್ ರೋಡ್ರಿಗಸ್, ಅಬ್ದುಲ್ ಲತೀಫ್ ಮಿತ್ತಬೈಲ್, ಶ್ರೀನಿಧಿ ಭಟ್, ಖಲೀಲ್, ಶಫಿಯುಲ್ಲಾ, ಹಮೀದ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರ. ಕಾರ್ಯದರ್ಶಿ ಜಿ.ಎ ಖಾದರ್ ಗೂಡಿನಬಳಿ ವಂದಿಸಿದರು.
Next Story







