ಹಿರಿಯ ರಂಗಕರ್ಮಿ ಸದಾನಂದ ಸುವರ್ಣರಿಗೆ ಬಿ.ವಿ.ಕಾರಂತ ಪ್ರಶಸ್ತಿ

ಮಂಗಳೂರು, ಜ.25: ರಂಗಭೂಮಿಯ ವಿಶಿಷ್ಟ ಸೇವೆಗಾಗಿ ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ ಬಿ.ವಿ.ಕಾರಂತ ಪ್ರಶಸ್ತಿಗೆ ಹಿರಿಯ ರಂಗಕರ್ಮಿ 92ರ ಹರೆಯದ ಸದಾನಂದ ಸುವರ್ಣ ಆಯ್ಕೆಯಾಗಿದ್ದಾರೆ.
90ರ ದಶಕದಲ್ಲಿ ಮುಂಬೈಯಿಂದ ಮಂಗಳೂರಿಗೆ ಮರಳಿದ್ದ ಸದಾನಂದ ಸುವರ್ಣ ‘ಉರುಳು’, ‘ಕೋರ್ಟ್ ಮಾರ್ಶಲ್’ ‘ಮಳೆ ನಿಲ್ಲುವವರೆಗೆ’ ಇತ್ಯಾದಿ ನಾಟಕಗಳ ಮೂಲಕ ಕರಾವಳಿಯ ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ್ದರು. ‘ಗುಡ್ಡೆದ ಭೂತ’ ವಂತೂ ತುಳುವರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು.
ಡಾ.ಶಿವರಾಮ ಕಾರಂತರ ಬದುಕನ್ನು ಸರಣಿಯಾಗಿ ದೂರದರ್ಶನದಲ್ಲಿ ಚಿತ್ರಿಸಿದ್ದು ಸುವರ್ಣರು ಕುಬಿ ಮತ್ತು ಇಯಾಲ, ಘಟಶ್ರಾದ್ಧ ನಾಟಕವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಹಿರಿಮೆಗೂ ಪಾತ್ರರಾಗಿದ್ದರು.
Next Story





