ಎಲ್ಲಾ ಸಮುದಾಯದವರು ಸೌಹಾರ್ದತೆಯಿಂದ ಬದುಕಿದರೆ ದೇಶದ ಉಳಿವು: ಉಸ್ಮಾನುಲ್ ಫೈಝಿ ತೋಡಾರ್
ಬೆಳ್ಳಾರೆಯಲ್ಲಿ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪದೊಂದಿಗೆ ಬೃಹತ್ ಮಾನವ ಸರಪಳಿ

ಸುಳ್ಯ: ಎಸ್‌ಕೆಎಸ್ಎಸ್‌ಎಫ್ ಕೇಂದ್ರ ಸಮಿತಿಯ ವತಿಯಿಂದ ಜನವರಿ 26ರ ಪ್ರಜಾಪ್ರಭುತ್ವ ದಿನದಂದು ಸಂಜೆ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪವನ್ನಿಟ್ಟು ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಬೆಳ್ಳಾರೆಯಲ್ಲಿ ನಡೆಯಿತು.
ಎಸ್‌ಕೆಎಸ್ಎಸ್ಎಫ್ ದ.ಕ ಈಸ್ಟ್ ಜಿಲ್ಲಾ ಸಮಿತಿಯ ವತಿಯಿಂದ ನಡೆದ ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಫೈಝಿ ತೋಡಾರು ಉದ್ಘಾಟಿಸಿದರು.
ದೇಶದಲ್ಲಿರುವ ಪ್ರತಿಯೊಂದು ಸಮುದಾಯವೂ ಸೌಹಾರ್ದತೆಯಿಂದ ಬದುಕಿದರೆ ಮಾತ್ರ ನಮ್ಮ ದೇಶದ ಉಳಿವು ಸಾಧ್ಯ. ಮನುಷ್ಯ ಸೇರಿ ಪ್ರಕೃತಿಯ ಎಲ್ಲಾ ಜೀವಿಗಳನ್ನೂ ಪ್ರೀತಿಸಬೇಕು. ಮನುಷ್ಯರ ಮಧ್ಯೆ ಪ್ರೀತಿ ಮತ್ತು ಸೌಹಾರ್ದತೆಯ ಸರಪಳಿ ನಿರ್ಮಾಣ ಆಗಬೇಕು ಎಂದು ಅವರು ಹೇಳಿದರು.
ಹಬೀಬುರಹ್ಮಾನ್ ತಂಙಳ್ ದುವಾಃ ನೆರವೇರಿಸಿದರು. ಬಳಿಕ ಮಾನವ ಸರಪಳಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‌ಕೆಎಸ್ಎಸ್ಎಫ್ ದ.ಕ.ಈಸ್ಟ್ ಅಧ್ಯಕ್ಷ ತಾಜುದ್ದೀನ್ ರಹ್ಮಾನಿ ಪ್ರತಿಜ್ಞೆ ಬೋಧಿಸಿದರು. ಎಸ್‌ಕೆಎಸ್ಎಸ್ಎಫ್ ಟ್ರೆಂಡ್ ಕರ್ನಾಟಕದ ಅಧ್ಯಕ್ಷ ಇಕ್ಬಾಲ್ ಬಾಳಿಲ ದಿಕ್ಸೂಚಿ ಭಾಷಣ ಮಾಡಿದರು. ಕೇಂದ್ರ ಸಮಿತಿ ಸದಸ್ಯ ಅಬೂಬಕ್ಕರ್ ರಿಯಾಝ್ ರಹ್ಮಾನಿ ಸಂದೇಶ ಭಾಷಣ ಮಾಡಿದರು. ಮಾನವ ಸರಪಳಿಗೂ ಮುನ್ನ ಸೌಹಾರ್ದ ಜಾಥಾ ನಡೆಯಿತು. ಬೆಳ್ಳಾರೆ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಮಂಗಳ ಧ್ವಜ ಹಸ್ತಾಂತರ ಮಾಡಿದರು. ಸ್ವಾಗತ ಸಮಿತಿ ಚೆಯರ್‌ಮೆನ್ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಹಾಗೂ ಎಸ್‌ಕೆಎಸ್ಎಸ್ಎಫ್ ದ.ಕ. ಈಸ್ಟ್ ಕೋಶಾಧಿಕಾರಿ ಹನೀಫ್ ಧೂಮಳಿಕೆ ಧ್ವಜ ಸ್ವೀಕರಿಸಿದರು.
ಚಿಂತಕ ಲಕ್ಷ್ಮೀಶ ಗಬ್ಬಲಡ್ಕ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ, ಎಸ್‌ಕೆಎಸ್ಎಸ್ಎಫ್ ಕೇಂದ್ರ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಯಾಮಾನಿ, ಶಂಸುದ್ದೀನ್ ದಾರಿಮಿ, ಅಬ್ಬಾಸ್ ದಾರಿಮಿ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಶರೀಫ್ ಫೈಝಿ ಕಡಬ, ಹಸನ್ ಬಾಖವಿ, ಅಶ್ರಫ್ ರಹ್ಮಾನಿ, ಶಾಫಿ ದಾರಿಮಿ ಅಜ್ಜಾವರ, ಮಜೀದ್ ದಾರಿಮಿ, ಅಬ್ದುಲ್ ಹಮೀದ್ ದಾರಿಮಿ, ಆಶ್ರಫ್ ಫೈಝಿ, ಅನ್ಸರ್ ಬಿ.ಎಚ್, ಶುಕೂರ್ ಜಿ.ಎನ್, ಹಮೀದ್ ಕುತ್ತಮೊಟ್ಟೆ, ಕೆ.ಕೆ.ಅಬೂಬಕ್ಕರ್ ಕೊಲ್ಪೆ, ಕೆ.ಎಂ.ಬಾವಾ ಹಾಜಿ ಕೂರ್ನಡ್ಕ, ಅಬ್ದುಲ್ಲಾ ಫೈಝಿ ಪೈಂಬೆಚ್ಚಾಲ್, ಬಾತಿಶಾ ಹಾಜಿ ಪಾಟ್ರಕೋಡಿ, ಸ್ವಾಗತ ಸಮಿತಿಯ ಕನ್ವೀನರ್ ಸಿದ್ದಿಕ್ ಅಡ್ಕ, ಎಸ್‌ಕೆಎಸ್ಎಸ್ಎಫ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಿ.ಎ.ಝಕರಿಯ್ಯ, ಜಿಲ್ಲಾ ಉಪಾಧ್ಯಕ್ಷ ಜಮಾಲುದ್ದೀನ್ ಕೆ.ಎಸ್ ಬೆಳ್ಳಾರೆ, ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕಲ್ಲಪಣೆ, ಕೋಶಾಧಿಕಾರಿ ನಾಶೀರ್ ಯು.ಪಿ ಬಿಝ್, ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಯು.ಪಿ. ಬಶೀರ್, ಬೆಳ್ಳಾರೆ,ಉರೂಸ್ ಸಮಿತಿ ಕೋಶಾಧಿಕಾರಿ ಝಕರಿಯಾ ನಿಡ್ಮಾರ್, ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ನಿರ್ದೇಶಕರಾದ ಬಶೀರ್. ಕೆ.ಎ, ಇಸ್ಮಾಯಿಲ್ ಬಿ,ಹಸೈನಾರ್. ಬಿ, ಹನೀಫ್ ನೆಟ್ಟಾರು, ಹಮೀದ್ ಹೆಚ್ ಎಂ,ಹಮೀದ್ ಅಲ್ಪಾ, ಉಸ್ಮಾನ್ ಹಾಜಿ, ಅಜರುದ್ದೀನ್ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.







