ಎಸ್ ವೈ ಎಸ್ ವತಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ಉಳ್ಳಾಲ: ಹೆಣ್ಣು ಮಕ್ಕಳಿಗೆ ವಿವಾಹ ಮಾಡಿ ಕೊಡಲು ಸಾಧ್ಯವಾಗದೇ ಸಂಕಷ್ಟ ಕ್ಕೀಡಾಗಿರುವ ಕುಟುಂಬ ಬಹಳಷ್ಟು ಇವೆ. ಇಂತಹ ಕುಟುಂಬ ವನ್ನು ಗುರುತಿಸಿ ಈ ಕುಟುಂಬದಲ್ಲಿ ವಿವಾಹ ಆಗದೆ ಉಳಿದಿರುವ ಹೆಣ್ಣು ಮಕ್ಕಳಿಗೆ ವಿವಾಹ ಮಾಡಿಸಿ ಕೊಡುವ ಕೆಲಸ ಸಂಘಟಕರು ಮಾಡಬೇಕು ಎಂದು ಉಚ್ಚಿಲ ಜುಮ್ಮಾ ಮಸೀದಿ ಮುದರ್ರಿಸ್ ಇಬ್ರಾಹಿಂ ಫೈಝಿ, ಕರೆ ನೀಡಿದರು.
ಅವರು ಎಸ್ ವೈ ಎಸ್ ಮೇರೇಜ್ ಸೆಲ್ ಕೆ.ಸಿ.ರೋಡ್ ಇದರ ಆಶ್ರಯದಲ್ಲಿ ಭಾನುವಾರ ನೂರ್ ಮಹಲ್ ನಲ್ಲಿ ನಡೆದ 12 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಎಸ್ ವೈ ಎಸ್ ದ.ಕ. ವೆಸ್ಟ್ ಅಧ್ಯಕ್ಷ ಇಸ್ಹಾಕ್ ಝುಹ್ ರಿ, ಮುನೀರ್ ಸಖಾಫಿ ಅಲ್ ಫುರ್ಖಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಎರಡು ಜೋಡಿ ವಿವಾಹ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸುನ್ನಿ ಜಂಇಯತುಲ್ ಉಲಮಾ ಕಾರ್ಯದರ್ಶಿ ಹುಸೈನ್ ಸ ಅದಿ ಕೆಸಿರೋಡ್ ನಿಖಾಹ್ ನೆರವೇರಿಸಿದರು. ಬೋಳಂತೂರು ವಿನ ಮುಹಮ್ಮದ್ ಅನ್ಸಾರ್ ವರನಿಗೆ ಉರುವಾಲು ಪದವು ಶಾಮಿಕ ಸುಲ್ತಾನ ಎಂಬ ವಧುವನ್ನು ಕಾಜೂರು ವಿನ ಮುಹಮ್ಮದ್ ಆಸೀಫ್ ಎಂಬ ವರನಿಗೆ ಜಾರಿಗೆಬೈಲ್ ನಿವಾಸಿ ನಸೀಮ ಜಿ.ಎ. ಎಂಬ ವಧುವನ್ನು ವಿವಾಹ ಮಾಡಿ ಕೊಡಲಾಯಿತು.
ಕಾರ್ಯಕ್ರಮದಲ್ಲಿ ಎಸ್ ಜೆಎಂ ತಲಪಾಡಿ ರೇಂಜ್ ಅಧ್ಯಕ್ಷ ಅಬ್ದುಲ್ಲ ಮದನಿ, ಎಸ್ ವೈ ಎಸ್ ತಲಪಾಡಿ ಸರ್ಕಲ್ ಅಧ್ಯಕ್ಷ ಮುಸ್ತಫಾ ಝುಹ್ ರಿ, ಕೋಟೆಕಾರ್ ಸರ್ಕಲ್ ಅಧ್ಯಕ್ಷ ಶಬೀರ್ ಅಶ್ ಅರಿ, ಎಸ್ ವೈ ಎಸ್ ಮೇರೇಜ್ ಸೆಲ್ ಚೇರ್ ಮನ್ ಯು.ಬಿ.ಮುಹಮ್ಮದ್ ಹಾಜಿ, ಕೆ.ಎಂ.ಜೆ. ಕೋಟೆಕಾರ್ ಸರ್ಕಲ್ ಅಧ್ಯಕ್ಷ ಪಿ.ಎ.ಅಬ್ಬಾಸ್ ಹಾಜಿ ಪೆರಿಬೈಲ್, ತಲಪಾಡಿ ಸರ್ಕಲ್ ಅಧ್ಯಕ್ಷ ಪಿ.ಐ.ಅಹ್ಮದ್ ಕುಂಞಿ ಹಾಜಿ, ಎಸ್ ಎಂಎ ತಲಪಾಡಿ ರೇಂಜ್ ಅಧ್ಯಕ್ಷ ಕೆ.ಎಂ.ಅಬ್ಬಾಸ್ ಕೊಳಂಗರೆ, ಎಸ್ ಎಸ್ ಎಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷ ಜಾಬೀರ್ ಹಿದಾಯತ್ ನಗರ, ತಲಪಾಡಿ ಸೆಕ್ಟರ್ ಅಧ್ಯಕ್ಷ ಮುಸ್ತಫಾ ಕೆ.ಸಿ.ನಗರ, ಇಸ್ಮಾಯಿಲ್ ಬಿ.ಎಚ್. ಉಸ್ಮಾನ್ ಕೆ, ಅಬೂಬಕ್ಕರ್ ಸಿದ್ದೀಕ್ , ಎ.ಎಂ ಅಬ್ಬಾಸ್ ಹಾಜಿ ಕೆಸಿರೋಡ್,ಎಂ.ಪಿ. ಮುಹಮ್ಮದ್ ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು.
ಉಮ್ಮರ್ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಎಸ್ ವೈ ಎಸ್ ಮೇರೇಜ್ ಸೆಲ್ ಕನ್ವಿನರ್ ಹಂಝ ಅಜ್ಜಿನಡ್ಕ ವಂದಿಸಿದರು.







